ನಾನ್ ಪುಟ್ಟನಂಜ (ಮನೆ ಮಾನ ಹೊತ್ತು)
ಸಂಗೀತ/ಸಾಹಿತ್ಯ: ಹಂಸಲೇಖ
ಗಾಯಕರು: ಮನು, ಮಿನ್ಮಿನಿ, ಶ್ಯಾಮಲಭಾವೆ
ಲ ಲ ಲ ಲ ಲ ಲ ಲ ಲ ಲ ಲ ಲ ಲ
ಲ ಲ ಲ ಲ ಲ ಲ ಲ ಲ ಲ ಲ ಲ ಲ
ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ
ಬೇರು ಇಲ್ಲ ಅಂದ್ರೆ ಹೂವ ಕೊಡದು ಕೊಂಬೆ
ಎತ್ತಿಗೆ ಕೊಟ್ಟ ಏರು ಗದ್ದೆಗೆ ಬಿಟ್ಟ ನೀರು
ಊರೆ ಬಿಟ್ರೆ ಹೆಂಗೆ ಹೇಳು
ಹೊಸ್ತಿಲು ದಾಟಿ ಹೋದಳು
ಬೀಜ ಇಟ್ಟ ಭೂಮಿ ಹಣ್ಣು ಕೊಟ್ಟ ಸ್ವಾಮಿ
ಹಳಸಿ ಕೊಟ್ರೆ ಹೆಂಗೆ ಹೇಳು
ಗೆದ್ದಿಲು ಕಟ್ಟಿ ಹೋದಳು
ಓ ಪುಟ್ಟಮಲ್ಲಿ ನೀ ಕೇಳು ಇಲ್ಲಿ
ಕಳೆ ತೆಗೆಯೊ ಭರದಲ್ಲಿ ತೆರೆ ಕಿತ್ತಳು ಬದುಕಲ್ಲಿ
ನಾನ್ ಪುಟ್ಟನಂಜ ನಾನ್ ಪುಟ್ಟನಂಜ
ಈ ಪ್ರೀತಿಯೆಂಬೊ ನಂಜುಂಡ ನಂಜ
ಲ ಲ ಲ ಲ ಲ ಲ ಲ ಲ ಲ ಲ ಲ ಲ
ಲ ಲ ಲ ಲ ಲ ಲ ಲ ಲ ಲ ಲ ಲ ಲ
ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ
ಬೇರು ಇಲ್ಲ ಅಂದ್ರೆ ಹೂವ ಕೊಡದು ಕೊಂಬೆ
ಬ್ಯಾಸಾರ ಮಾಡಿಕುಂತ್ರೆ ಗ್ರಾಚಾರ ಬಿಡದು
ನೇಸರ ಸುಟ್ಟನೆಂದು ಭೂತಾಯಿ ಅಳದು
ನಾನು ಅನ್ನೊ ಹೆಣ್ಣು ಭೇದ ಮಾಡೊ ಕಣ್ಣು
ಪ್ರೀತಿ ಮಯ್ಯ ಹುಣ್ಣು ಕೇಳು
ಮನಸು ಮುರಿದು ಹೋದಳು
ಹೆಣ್ಣು ಅಂದ್ರೆ ಮಾನ ಮಾನ ಅಂದ್ರೆ ಮನೆ
ಮನೆ ಬಿಟ್ರೆ ಹೆಂಗೆ ಹೇಳು
ಮಾನ ತೆಗೆದು ಹೋದಳು
ಓ ಪುಟ್ಟಮಲ್ಲಿ ಬಾ ಕೇಳು ಇಲ್ಲಿ
ಮನೆ ಗುಡಿಸೊ ಭರದಲ್ಲಿ ಮನೆ ಒಡೆದಳು ಮನೆ ಒಡತಿ
ನಾನ್ ಪುಟ್ಟನಂಜ ನಾನ್ ಪುಟ್ಟನಂಜ
ಈ ಪ್ರೀತಿಯೆಂಬೊ ನಂಜುಂಡ ನಂಜ
ಲ ಲ ಲ ಲ ಲ ಲ ಲ ಲ ಲ ಲ ಲ ಲ
ಲ ಲ ಲ ಲ ಲ ಲ ಲ ಲ ಲ ಲ ಲ ಲ
ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ
ಬೇರು ಇಲ್ಲ ಅಂದ್ರೆ ಹೂವ ಕೊಡದು ಕೊಂಬೆ
ಅಡಿಕೇಗೆ ಹೋದ ಮಾನ ಆನೇಗು ಸಿಗದು
ಮಡಿಕೇಯ ಒಡೆಯೊ ಕೈಲಿ ಸಂಸಾರ ಇರದು
ಒಂದೆ ಸಾರಿ ಹುಟ್ಟು ಒಂದೆ ಸಾರಿ ಪ್ರೀತಿ ಒಂದೆ ಸಾವು ನಂಗೆ ಕೇಳು
ನಿತ್ಯ ಸಾವು ಕೊಟ್ಟಳು ಅಂಗೀ ಕಳಚೊ ಹಂಗೆ ಮಾತು ತಿರಿಚೊ ಹಂಗೆ
ಮನಸು ಮಡುಚೋರಲ್ಲ ನಾವು
ಮಾತು ತಪ್ಪಿ ಹೋದಳು
ಓ ಪುಟ್ಟಮಲ್ಲಿ ನೀ ಕೇಳು ಇಲಿ
ಕೊಳೆ ಕಳೆಯುವ ಭರದಲ್ಲಿ ಕಣ ಹರಿದಲು ಬಾಳಲ್ಲಿ
ನಾನ್ ಪುಟ್ಟನಂಜ ನಾನ್ ಪುಟ್ಟನಂಜ
ಈ ಪ್ರೀತಿಯೆಂಬೊ ನಂಜುಂಡ ನಂಜ
ಲ ಲ ಲ ಲ ಲ ಲ ಲ ಲ ಲ ಲ ಲ ಲ
ಲ ಲ ಲ ಲ ಲ ಲ ಲ ಲ ಲ ಲ ಲ ಲ
ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ
ಬೇರು ಇಲ್ಲ ಅಂದ್ರೆ ಹೂವ ಕೊಡದು ಕೊಂಬೆ
No comments:
Post a Comment
Note: Only a member of this blog may post a comment.