Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Thursday, July 25, 2019

ಈ ಸುಗ್ಗಿ ತಂದವಳರಾಮ್ಮಾ - ಪುಟ್ನಂಜ

  Sandeep T Gowda       Thursday, July 25, 2019
ಈ ಸುಗ್ಗಿ ತಂದವಳರಾಮ್ಮಾ
ಸಂಗೀತ/ಸಾಹಿತ್ಯ: ಹಂಸಲೇಖ
ಹಾಡಿದವರು: ಮನು, ಚಿತ್ರಾ


ಅಮ್ಮಾನ ನೋಡಿರಮ್ಮಾ ಸಮ್ಮಾನ ಮಾಡಿರಮ್ಮಾ
ಬಾಗಿನ ನೀಡಿರಮ್ಮಾ ಭಾಗ್ಯಾನ ಬೇಡಿರಮ್ಮಾ
ಹೊಕ್ಕಳ ಬಳ್ಳಿಗೆ ಕುಡುಗೋಲಿಟ್ಟರು ನಗ್ತಾಳೇ...
ನಮ್ಮಮ್ಮಾ  ನಮ್ಮಮ್ಮಾ ನಮ್ಮಮ್ಮಾ  ನಮ್ಮಮ್ಮಾ
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...
ನಮ್ಮಮ್ಮಾ  ನಮ್ಮಮ್ಮಾ ನಮ್ಮಮ್ಮಾ  ನಮ್ಮಮ್ಮಾ
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...

ಈ ಸುಗ್ಗಿ ತಂದವಳರಾಮ್ಮಾ.....  ನಮ್ಮಮ್ಮಾ  ನಮ್ಮಮ್ಮಾ
ಈ ಹುಗ್ಗಿ ತಂದವಳಾರಮ್ಮಾ.... ಭೂಮಿ ತಾಯಮ್ಮಾ....
ಈ ಅಂಬಲಿ ತಂದವಳರಮ್ಮಾ... ನಮ್ಮಮ್ಮಾ  ನಮ್ಮಮ್ಮಾ
ಈ ಓಕುಳಿ ತಂದವರಾರಮ್ಮಾ ಭೂಮಿ ತಾಯಮ್ಮಾ...
ಒಂದು ನೆಲ್ಲು ಚೆಲ್ಲಿದರೇ ರಾಶಿ ಮಾಡುವಾ
ಇವಳದೇನು ಕರುಣೆ ಪ್ರೀತಿಯೋ...
ನಮ್ಮಮ್ಮಾ  ನಮ್ಮಮ್ಮಾ ನಮ್ಮಮ್ಮಾ  ನಮ್ಮಮ್ಮಾ
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...
ನಮ್ಮಮ್ಮಾ  ನಮ್ಮಮ್ಮಾ ನಮ್ಮಮ್ಮಾ  ನಮ್ಮಮ್ಮಾ
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...
ಹೇ..ಹೇ..ಹೆಹೆ...ಆ.ಆ.ಆ  ಹೇ..ಹೇ..ಹೆಹೆ...ಆ.ಆ.ಆ
ಹೇ..ಹೇ..ಹೆಹೆ...ಆ.ಆ.ಆ  ಹೇ..ಹೇ..ಹೆಹೆ...ಆ.ಆ.ಆ
ಈ ಚಿನ್ನಮ್ಮ ನಮ್ಮಮ್ಮನಿಗೆ...
ಮಗಳಮ್ಮಾ..  ಮಗಳಮ್ಮಾ
ಈ ಗಂಗಮ್ಮ ನಮ್ಮಮ್ಮನಿಗೇ ಚೊಚ್ಚಲ ಮಗಳಮ್ಮಾ
ಹೊ.. ಚೊಚ್ಚಲ ಮಗಳಮ್ಮಾ ಹೋ.. ಕೆಚ್ಚಲ ಮಗಳಮ್ಮಾ
ಆ.. ಮಂಜಮ್ಮ ನಮ್ಮಮ್ಮನಿಗೇ...
ತಂಗ್ಯಮ್ಮಾ ... ತಂಗ್ಯಮ್ಮಾ
ಈ.. ಗಾಳ್ಯಾಮ್ಮ ನಮ್ಮಮ್ಮನಿಗೇ..
ಹತ್ತಿರದವಳಮ್ಮಾ ಹೋ.. ಬಿಟ್ಟಿರದವಳಮ್ಮಾ
ನಮ್ಮ ಅಮ್ಮನೂರಿನ ಬಳಗ ತುಂಬಾ ತುಂಬಾ ಕಿರಿದಮ್ಮಾ
ಇವಳಿಗೀಗ ಶರಣು ಶರಣು ಶರಣು ಕೋಟಿ ಶರಣಮ್ಮಾ...
ಈ ಸುಗ್ಗಿ ತಂದವಳರಾಮ್ಮಾ.....  ನಮ್ಮಮ್ಮಾ  ನಮ್ಮಮ್ಮಾ
ಈ ಹುಗ್ಗಿ ತಂದವಳಾರಮ್ಮಾ.... ಭೂಮಿ ತಾಯಮ್ಮಾ....
ಈ ಅಂಬಲಿ ತಂದವಳರಮ್ಮಾ... ನಮ್ಮಮ್ಮಾ  ನಮ್ಮಮ್ಮಾ
ಈ..  ಓಕುಳಿ ತಂದವರಾರಮ್ಮಾ ಭೂಮಿ ತಾಯಮ್ಮಾ...
ಓ... ಒಂದು ನೆಲ್ಲು ಚೆಲ್ಲಿದರೇ ರಾಶಿ ಮಾಡುವಾ
ಇವಳದೇನು ಕರುಣೆ ಪ್ರೀತಿಯೋ...
ನಮ್ಮಮ್ಮಾ  ನಮ್ಮಮ್ಮಾ ನಮ್ಮಮ್ಮಾ  ನಮ್ಮಮ್ಮಾ
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...
ಹೊ.. ಹೊ.. ಹೋಹೋ.. ಹೊ..ಹೊ.. ಹೋಹೊಹೋ..
ಹೊ.. ಹೊ.. ಹೋಹೋ.. ಹೊ..ಹೊ.. ಹೋಹೊಹೋ..
ಈ ಕರಿಯ ನೇಗಿಲು ಕಟ್ಟಿದರು... ಅಚ್ಚಮ್ಮಾ.. ಮೆಚ್ಚಮ್ಮಾ
ಈ.. ಬಿಳಿಯ ಕಾಳು ಬಿತ್ತಿದರು... ಬೇಡ ಅನಳಮ್ಮಾ.. ಬೇಧ ಇರದಮ್ಮಾ
ಈ.. ಕೆಂಚ ಗೊಬ್ಬರ ಹರವಿದರೋ... ಅಚ್ಚಮ್ಮಾ... ಮೆಚ್ಚಮ್ಮಾ..
ಈ.. ಎಡಚ ಕವಣೆ ಬೀರಿದರೂ ಪಾಪ ಅನಳಮ್ಮಾ ... ಕೋಪ ಇರದಮ್ಮಾ
ನಮ್ಮ ಅಮ್ಮ ಎಂದು ಎಂದು ಮೇಲು ಕೀಳು ಮಾಡಿಲ್ಲಾ...
ಮಕ್ಕಳಾಗಿ ನಾವು ಅವಳ ಲಾಲಿ ಹಾಡಬೇಕಮ್ಮಾ..
ಈ ಸುಗ್ಗಿ ತಂದವಳರಾಮ್ಮಾ.....  ನಮ್ಮಮ್ಮಾ  ನಮ್ಮಮ್ಮಾ
ಈ ಹುಗ್ಗಿ ತಂದವಳಾರಮ್ಮಾ.... ಭೂಮಿ ತಾಯಮ್ಮಾ....
ಈ ಅಂಬಲಿ ತಂದವಳರಮ್ಮಾ... ನಮ್ಮಮ್ಮಾ  ನಮ್ಮಮ್ಮಾ
ಈ ಓಕುಳಿ ತಂದವರಾರಮ್ಮಾ ಭೂಮಿ ತಾಯಮ್ಮಾ...
ಓ... ಒಂದು ನೆಲ್ಲು ಚೆಲ್ಲಿದರೇ ರಾಶಿ ಮಾಡುವಾ
ಇವಳದೇನು ಕರುಣೆ ಪ್ರೀತಿಯೋ...
ನಮ್ಮಮ್ಮಾ  ನಮ್ಮಮ್ಮಾ ನಮ್ಮಮ್ಮಾ  ನಮ್ಮಮ್ಮಾ
ಭೂಮಿ ತಾಯಮ್ಮಾ... ಭೂಮಿ ತಾಯಮ್ಮಾ...

logoblog

Thanks for reading ಈ ಸುಗ್ಗಿ ತಂದವಳರಾಮ್ಮಾ - ಪುಟ್ನಂಜ

Previous
« Prev Post

No comments:

Post a Comment

Note: Only a member of this blog may post a comment.