ಶೃಂಗಾರ ಕಾವ್ಯ (1993)
ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹಾಡಿದವರು: ಎಸ್.ಪಿ.ಬಿ., ಚಿತ್ರಾ
ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ
ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ
ನವ ಚೈತ್ರ ನವ ತರುಣ ಗಂಡು : ನವ ಚೈತ್ರ ನವ ತರುಣ
ಬದುಕಿನ ತುಂಬ ತುಂಬಿದೆ
ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ...
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಓ.. ಓ.. ಓ.. ಓ.. ಓ.. ಓ..
ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ
ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ
ಹೊಸ ಮಾತು ಹೊಸ ಮುತ್ತು
ಹೊಸ ಮಾತು ಹೊಸ ಮುತ್ತು
ಬದುಕಿನ ತುಂಬ ತುಂಬಿದೆ
ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ
ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೆ
ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೆ
ಹೊಸದೆಲ್ಲ ಸವಿ ಬೆಲ್ಲ
ಹೊಸದೆಲ್ಲ ಸವಿ ಬೆಲ್ಲ
ಬದುಕಿನ ತುಂಬ ಸೇರಿದೆ
ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ
No comments:
Post a Comment
Note: Only a member of this blog may post a comment.