ಹುಟ್ಟಿದ ಊರನು ಬಿಟ್ಟು ಬಂದ ಮೇಲೆ
ಇನ್ನೇನು ಬಿಡುವುದು ಬಾಕಿ ಇದೆ
ಮಾಡೋದೆಲ್ಲ ಮಾಡಿ ಅಳಬೇಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ..
ಊರ ದಿಕ್ಕಿನ ಗಾಳಿ ತಂದಿದೆ
ಒಂದು ಕಾಣದ ಕೂಗನ್ನು
ತವರಿಗಿಂತ ಬೆಚ್ಚನೆ ಜಾಗ
ಹೇಳು ಎಲ್ಲಿದೆ ನಿಂಗಿನ್ನು..
ನಿಂಗಿದು ಬೇಕಿತ್ತಾ ಮಗನೆ
ವಾಪಸ್ಸು ಹೊಂಟೋಗು ಶಿವನೇ
ಬ್ಯಾಗು ಹಿಡಿ, ಸೀಧಾ ನಡಿ
ಬೋರ್ಡು ನೋಡಿ, ಬಸ್ಸು ಹಿಡಿ
ಹುಟ್ಟಿದ ಊರನು ಬಿಟ್ಟು ಬಂದ ಮೇಲೆ
ಇನ್ನೇನು ಬಿಡುವುದು ಬಾಕಿ ಇದೆ
ಮಾಡೋದೆಲ್ಲ ಮಾಡಿ ಅಳಬೇಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ..
ಬ್ಯಾರೆಲ್ಲೆ ಇದ್ಧರು ಇದ್ಧು ಸತ್ತಂಗೆ
ಊರಲ್ಲೇ ನಿನ್ನ ಉಸಿರಿದೆ
ನಿನ್ನೂರ ನಡುವಿನ ಆಲದ ಮರದಲಿ
ನೀ ಕೆತ್ತಿ ಬಂದ ಹೆಸರಿದೆ
ಕಿತ್ತೋದ ಕಾಸಿಗೆ, ಕಿತ್ತಾಡೋ ಕೀರ್ತಿಗೆ
ಹೈವೇಲಿ ಲಾರಿ ಹಿಡಿದು ನೀ ಬಂದೆ
ಪಟ್ಟಣಕ್ಕೆ ಬಂದು ಸಗಣಿಯ ಮೇಲಿನ
ಸಂಕ್ರಾಂತಿ ಹೂವಿನಂತೆ ನೀನಾದೆ
ಹಬ್ಬಕ್ಕೆ ಹಳೆ ಹುಡುಗಿ ಬರತಾಳೊ
ಮಗನಿಗೆ ನಿನ್ನ ಹೆಸರ್ ಇಟ್ಟಾಳೋ
ಈ ಬಾರಿ ಒಳ್ಳೆ ಪಸಲಂತೆ
ಅತ್ತಿಗೆ ತಿರುಗ ಬಸಿರಂತೆ
ನಿಮ್ಮಾವ ಎಲೆಕ್ಶನ್ ಗೆದ್ನನ್ತೆ
ದೊಡ್ಡಪ್ಪ ಸಿಗರೇಟ್ ಬಿಟ್ನಂತೆ
ಅತ್ತೆಯ ಮಗಳು ಓದ್ತಾಳೋ
ಆಗಾಗ ನಿನ್ನ ನಂಬರ್ ಕೇಳ್ತಳೋ
ನಿನಗೂ ಡಿಮ್ಯಾಂಡ್ ಇದೆ ಮಗನೆ
ವಾಪಸ್ಸು ಹೊಂಟೋಗು ಶಿವನೇ
ಬ್ಯಾಗು ಹಿಡಿ, ಸೀಧಾ ನಡಿ
ಬೋರ್ಡು ನೋಡಿ, ಬಸ್ಸು ಹಿಡಿ
ಹುಟ್ಟಿದ ಊರನು ಬಿಟ್ಟು ಬಂದ ಮೇಲೆ
ಇನ್ನೇನು ಬಿಡುವುದು ಬಾಕಿ ಇದೆ
ಮಾಡೋದೆಲ್ಲ ಮಾಡಿ ಅಳಬೇಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ..
ಇದ್ದಕ್ಕಿದಂತೆ ಏನೇನೋ ಅನಿಸೀ
ಕಣ್ಣು ತುಂಬಿಕೊಳ್ಳೋದ್ಯಾಕೆ
ಅಪ್ಪ ಅಮ್ಮ ಇಬ್ರೂ ಹತ್ರ
ಕುಂತುಕೊಂಡು ಅಳಬೇಡ ಅಂದಂಗ್ ಅಗೋದ್ಯಾಕೆ
ದಿಕ್ಕು ಕೆಟ್ಟವನು ಕಾಲಿದ್ದು ಹೆಳವ
ಎತ್ಲಾಗೆ ಹೋದ್ರು ಒಂದೇ ನೀನು
ಎಲ್ಲಿಂದ ಬಂದೆಯೊ ಅಲ್ಲೇ ಹುಡುಕಾಡು
ದುರ್ಬೀನು ಹಾಕಿಕೊಂಡು ನಿನ್ನೆ ನೀನು
ಚದ್ದಿದೋಸ್ತೆಲ್ಲ ನಿನ್ನ ಬೈತಾರೆ
ಪಕ್ಕದ ಮನೆ ಹುಡುಗಿ ಕಾಯ್ತಾಳೆ
ಕಲ್ಸಿದ ಮೇಸ್ಟ್ರು ಹೋಗ್ಬಿಟ್ಟ್ರು
ಮುತ್ತಜ್ಜನ ಮನೆ ಮಾರ್ಬಿಟ್ಟ್ರು
ತಂಗಿಯ ಗಂಡ ಲಾಸಗೋದ
ಅಣ್ಣಂಗೆ ಕಾಯಿಲೆ ಮೊನ್ನೆ ಇಂದ
ಅಪ್ಪಂಗೆ ಉಸಿರೇ ಸಾಕಾಗಿದೆ
ಅವ್ವಂಗೆ ನೆನಪೇ ನಿಂತೋಗಿದೆ
ಕಂಡೀಶನ್ ಹೀಂಗಿದೆ ಮಗನೆ
ವಾಪಸ್ಸು ಹೊಂಟೋಗು ಶಿವನೇ
ಬ್ಯಾಗು ಹಿಡಿ, ಸೀಧಾ ನಡಿ
ಕಣ್ಣೋರ್ಸಿ, ಬಸ್ಸು ಹಿಡಿ
ಬ್ಯಾಗು ಹಿಡಿ, ಸೀಧಾ ನಡಿ
ಕಣ್ಣೋರ್ಸಿ ಬಸ್ಸು ಹಿಡಿ.
No comments:
Post a Comment
Note: Only a member of this blog may post a comment.