ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯ ಬೇಡ
ಬೆಟ್ಟದ ತುದಿಯಲ್ಲಿ ಬೆಳದ ವೃಕ್ಷಗಳಿಗೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಹುಟ್ಟಿಸಿದ ದೇವನು ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಸಂಶಯವಿಲ್ಲ
ಕಲ್ಲಿನೋಳ ಹುಟ್ಟಿರುವ ಕ್ರಿಮಿ ಕೀಟಗಳಿಗೆ
ಅಲ್ಲೇ ಆಹಾರವನ್ನು ತಂದಿತ್ತವರು ಯಾರು
ಪುಲ್ಲಲೋಕಾನ ನಮ್ಮ ನೆಲಯಾದಿ ಕೇಶವನು
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
--ಕನಕದಾಸರು
No comments:
Post a Comment
Note: Only a member of this blog may post a comment.