Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Monday, August 28, 2017

ಎಲೆ ಕೆಂಚಿ ತಾರೆ ನಮ್ಮನೆತಂಕ ಬಾರೆ (Kannada Janapada song lyrics)

  Sandeep T Gowda       Monday, August 28, 2017
ಎಲೆ ಕೆಂಚಿ ತಾರೆ ನಮ್ಮನೆತಂಕ ಬಾರೆ
ನೀನು ಬಾರದೇ ಹೋದರೆ ನಾ ಕೆರೆಬಾವಿ ಪಾಲೆ ।।
ಕಲ್ಲು ಕಟ್ಟಿದ ಬಾವಿ ಬೆಲ್ಲದ ಸೋಪಾನ
ಈ ಊರೆಲ್ಲ ಬಳಸೋದು ಆ ಬಾವಿ ನೀರ ।
ಬಾರೋ ಮನೆಗ್ಹೋಗಾನ ।। ಎಲೆ ।।
ನೀನು ಬಂದರೆ ನಮ ಕೇರಿ ಒಂದಾಗುತೈತಿ
ಬಾರೆ ಮನೆಗ್ಹೋಗಾನ
ಆತ್ತಲಿಂದ ನೀ ಬಂದೆ ಇತ್ತಲಿಂದ ನಾನು ಬಂದೆ
ನಿನ್ನ ವಾರಿಮುಸುಕು ತೆಗೆಯೆ
ಮೋರೆಯ ನೋಡಾನ  ।। ಎಲೆ ।।
ನನ್ನಿಂದ ಮನ್ನಿಂದ ನಿನ್ನ ಮ್ಯಾಗಳ ಗ್ಯಾನ
ಸುಣ್ಣದ ನೆವ ಮಾಡಿ ಸುಳಿದಾಡು ಮನೆ ಮುಂದೆ
ಬಾರೋ ಮನೆಗ್ಹೋಗಾನ
ನಡುವಿನ ಒಡ್ಯಾಣ ಮಾಡಿಸಿಕೊಡುವೆನು
ಚೆನ್ನಿ ನಿನ್ನ ಕೈಗೆ ಹಿಡಿಯೊನ್ನ ಕೊಟ್ಟೇನು ।। ಎಲೆ ।।
ಅಕ್ಕ ತಂಗೀರು ನಾವು ರೊಕ್ಕ ಕೇಳುವರಲ್ಲ
ನನ್ನ ಗ್ಯಾನ ಬಿತ್ತಲ್ಲ ನಿನಮ್ಯಾಲೆ
ಬಾರೋ ಮನೆಗ್ಹೋಗಾನ
ಮಾಗಿ ಒಡೆದರೆ ಹಂಟೆ ಜಾಲಿ ಕಡಿದಾರೆ ಕೆಚ್ಚಿ
ನಿನ್ನಗಲ್ಲವ ಕಡಿದಾರೆ ಬೆಲ್ಲದೊಂದಚ್ಚಿ ।। ಎಲೆ ।।
logoblog

Thanks for reading ಎಲೆ ಕೆಂಚಿ ತಾರೆ ನಮ್ಮನೆತಂಕ ಬಾರೆ (Kannada Janapada song lyrics)

Previous
« Prev Post

No comments:

Post a Comment

Note: Only a member of this blog may post a comment.