Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Monday, August 28, 2017

ಚೆಲ್ಲಿದರು ಮಲ್ಲಿಗೆಯ (Kannada Janapada song lyrics)

  Sandeep T Gowda       Monday, August 28, 2017
ಚೆಲ್ಲಿದರು ಮಲ್ಲಿಗೆಯ


ಚೆಲ್ಲಿದರು ಮಲ್ಲಿಗೆಯಾ...
ಬಾಣಾಸೂರೇರಿ ಮ್ಯಾಲೆ..
ಅಂದಾದ ಚೆಂದಾದ ಮಾಯ್ಗಾರ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ||

ಮಾದಪ್ಪ ಬರುವಾಗಾ..
ಮಾಳೆಪ್ಪ ಘಮ್ಮೆಂದಿತೊ
ಮಾಳದಲಿ ಗರುಕೆ ಚಿಗುರ್ಯಾವೆ
ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ||


ಸಂಪಿಗೆ ಹೂವ್ನಂಗೇ
ಇಂಪಾದೊ ನಿನ್ನ ಪರುಸೆ
ಇಂಪಾದೊ ನಿನ್ನ ಪರುಸೆ
ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ||


ಮಲ್ಲಿಗುವಿನ ಮಂಚಾ
ಮರುಗಾದ ಮೇಲೊದಪು
ತಾವರೆ ಹೂವು ತಲೆದಿಂಬು
ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ||


ಹೊತ್ತು ಮುಳಿಗಿದರೇನೂ
ಕತ್ತಲಾದರೇನು
ಅಪ್ಪಾ ನಿನ್ನ ಪರುಸೆ
ಬರುವೇವು ನಾವು ಚೆಲ್ಲಿದರು ಮಲ್ಲಿಗೆಯಾ||

logoblog

Thanks for reading ಚೆಲ್ಲಿದರು ಮಲ್ಲಿಗೆಯ (Kannada Janapada song lyrics)

Previous
« Prev Post

No comments:

Post a Comment

Note: Only a member of this blog may post a comment.