ಶುಭೋದಯ
ನವೋದಯದ
ಕಿರಣಲೀಲೆ
ಕನ್ನಡದೀ
ನೆಲದ ಮೇಲೆ
ಶುಭೋದಯವ
ತೆರೆದಿದೆ -
ನದನದಿಗಳ
ನೀರಿನಲ್ಲಿ
ಗಿರಿವನಗಳ
ಮುಡಿಗಳಲ್ಲಿ
ಶಿಲ್ಪ
ಕಲಾ ಗಾನ ಕಾವ್ಯ
ಗುಡಿಗೋಪುರ
ಶಿಖರದಲ್ಲಿ -
ಮುಗ್ಧ
ಜಾನಪದಗಳಲ್ಲಿ
ದಗ್ಧ
ನಗರ ಗೊಂದಲದಲಿ
ಯಂತ್ರ
ತಂತ್ರದಟ್ಟಹಾಸ
ಚಕ್ರಗತಿಯ
ಪ್ರಗತಿಯಲ್ಲಿ
ಹಳಬರಲ್ಲಿ
ಹೊಸಬರಲ್ಲಿ
ಹಿರಿಯರಲ್ಲಿ
ಕಿರಿಯರಲ್ಲಿ
ಹೊಸ
ಚೇತನುದುತ್ಸಾಹದ
ಚಿಲುಮೆ
ಚಿಮ್ಮುವೆದೆಗಳಲ್ಲಿ.
Thanks for reading ಶುಭೋದಯ
No comments:
Post a Comment
Note: Only a member of this blog may post a comment.