ಬಂದೇ ಬರುತಾವ...
- ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಬಂದೇ ಬರುತಾವ ಕಾಲ ||
ಮಂದಾರ ಕನಸನು ಕಂಡಂತ ಮನಸನು
ಒಂದು ಮಾಡುವ ಸ್ನೇಹಜಾಲ
ಮಾಗಿಯ ಎದೆ ತೂರಿ ಕೂಗಿತೋ ಕೋಗಿಲ
ರಾಗದ ಚಂದಕೆ ಬಾಗಿತೋ ಬನವೆಲ್ಲ
ತುಗೂತ ಬಳ್ಳಿ ಮೈಯನ್ನ
ಸಾಗದು ಬಾಳು ಏಕಾಂಕಿ ಎನುತಾವ
ಹುಣ್ಣಿಮೆ ಬಾನಿಂದ ತಣ್ಣನೆ ಸವಿಹಾಲು
ಚೆಲ್ಲುತ ಮೆಲ್ಲನೆ ನಲಿಸಿದೆ ಭುವಿಯನು
ಮುಸುಕಿದೆ ಮಾಯೆ ಜಗವನು
ಭುವಿ ಬಾನು ಸೇರಿ ಹರಸ್ಯಾವ ಬಾಳನು
No comments:
Post a Comment
Note: Only a member of this blog may post a comment.