ಸಂಜೆಯ ರಾಗಕೆ...
- ಸುಬ್ಬರಾಯ ಚಕ್ಕೊಡಿ
ಸಂಜೆಯ ರಾಗಕೆ ಬಾನು ಕೆಂಪೇರಿದೆ
ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ ಈಗ ರಂಗೇರಿದೆ ||
ಮರಗಿಡ ನೆಲದ ಮೇಲೆ ನೆರಳನು ಹಾಸಿದೆ
ಹೂಗಳ ದಳಗಳ ನಡುವೆ ನಿನದೇ ಬೆರಳಿದೆ
ಗಾಳಿಯ ಜೊತೆಯ ಗಂಧವು ನಿನ್ನನು ಸವರಿದೆ
ಒಳಗೂ ಹೊರಗೂ ವ್ಯಾಪಿಸಿ ಯವ್ವನ ಕೆರಳಿದೆ
ಕೊಳದಲಿ ಮೂಡಿದ ಬಿಂಬವು ಹೂಗಳ ಮರೆಸಿದೆ
ತಳದಲಿ ಎಂತಹ ಕನಸಿನ ಲೋಕವು ತೆರೆದಿದೆ
No comments:
Post a Comment
Note: Only a member of this blog may post a comment.