Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, January 16, 2013

ಆನಂದಮಯ ಈ..

  Sandeep T Gowda       Wednesday, January 16, 2013

ಆನಂದಮಯ ಈ...

- ಕುವೆಂಪು

ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ
ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ ||

ಬಿಸಿಲಿದು ಬರಿ ಬಿಸಿಲಲ್ಲೊವೋ ಸೂರ್ಯನ ಕೃಪೆ ಕಾಣೋ
ಸೂರ್ಯನು ಬರಿ ರವಿಯಲ್ಲೊವೋ ಆ ಭ್ರಾಂತಿಯ ಮಾಣೋ

ರವಿವಧನವೆ ಶಿವ ಸಧನವೋ ಬರಿ ಕಣ್ಣದು ಮಣ್ಣೋ
ಶಿವನಿಲ್ಲದೆ ಸೌಂದರ್ಯವೇ ಶವಮುಖದ ಕಣ್ಣೋ

ಉದಯದೊಳೇನ್ ಹೃದಯವ ಕಾಣ್ ಅದೇ ಅಮೃತದ ಹಣ್ಣೋ
ಶಿವ ಕಾಣದೆ ಕವಿ ಕುರುಡನೋ ಶಿವ ಕಾವ್ಯದ ಕಣ್ಣೋ
x
logoblog

Thanks for reading ಆನಂದಮಯ ಈ..

Previous
« Prev Post

No comments:

Post a Comment

Note: Only a member of this blog may post a comment.