ಮಾಮರವೆಲ್ಲೋ ಕೋಗಿಲೆಯೆಲ್ಲೋ...
- ಚಿ. ಉದಯಶಂಕರ್
ಮಾಮರವೆಲ್ಲೋ ಕೋಗಿಲೆಯೆಲ್ಲೋ
ಏನೀ ಸ್ನೇಹ ಸಂಭಂದ ಎಲ್ಲಿಯದು ಈ ಅನುಬಂಧ ||
ಸೂರ್ಯನು ಎಲ್ಲೋ, ತಾವರೆ ಎಲ್ಲೋ
ಕಾಣಲು ಕಾತರ ಕಾರಣವೇನೋ
ಚಂದಿರನೆಲ್ಲೋ, ನೈದಿಲೆಯೆಲ್ಲೋ
ನೋಡಲು ಅರಳುವ ಸಡಗರವೇನೋ
ಎಲ್ಲೇ ಇರಲಿ, ಹೇಗೆ ಇರಲಿ, ಕಾಣುವ ಆಸೆ ಏತಕೊ ಏನೋ
ಹುಣ್ಣಿಮೆಯಲ್ಲಿ ತಣ್ಣನೆ ಗಾಳಿ
ಬೀಸಲು ನಿನ್ನ ನೆನಪಾಗುಹುದು
ದಿನ ರಾತ್ರಿಯಲಿ ಏಕಾಂತದಲಿ
ಏಕೋ ಏನೋ ನೋವಾಗುಹುದು
ಬಯಕೆಯು ತುಂಬಿ, ಆಸೆಯ ದುಂಬಿ
ಎದೆಯನು ಕೊರೆದು ಕಾಡುಹುದೇನು
No comments:
Post a Comment
Note: Only a member of this blog may post a comment.