ಬಾ ಚಕೋರಿ...
- ಕುವೆಂಪು
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ ||
ಜೊನ್ನ ಜೇನಿಗೆ ಬಾಯಾರಿದೆ ಚಕೋರ ಚುಂಬನ
ಚಂದ್ರಿಕ ಮಧುಪಾನ ಮತ್ತ
ಪೀನ ಕುಂಭ ಪಯೋಧವಿತ್ತ
ವಕ್ಷ ಪರಿಲಂಬನ ನಿಮಿತ್ತ ನಿರಾವಲಂಬನ
ಚರಣ ನೂಪುರ ಕಿಂಕಿಣಿ ಕೊಳ
ಮದನ ಸಿಂಜಿನಿ ಜನಿತ ನಿಪ್ಪಾಣ
ಚಿತ್ತ ರಂಜನಿ ತಳುವ ದೀಕ್ಷಣ
ಚಂದ್ರ ಮಂಚಕೆ ಬಾ ಚಕೋರಿ
ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ
ಕ್ಷೀರ ಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗು ಮಂಚಕೆ
ಬಾ ಚಕೋರಿ ಬಾ ಚಕೋರಿ
ಎದೆ ಹಾರಿದೆ ಬಾಯಾರಿದೆ ಚಕೋರ ಚುಂಬನ
ನಿಕುಂಜ ರತಿವನ ಮದನ ಯಾಗಕೆ
ಅನಂಗರಕ್ತಿಮ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚ ರಸಾಗ್ನಿ ಪಕ್ಷಿಯ ಅಚಂಚು ಚುಂಬನ
No comments:
Post a Comment
Note: Only a member of this blog may post a comment.