ನಾರಾಯಣ ನಿನ್ನ ನಾಮದ...
- ಪುರಂದರ ದಾಸ
ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತ ಎನ್ನ ನಾಲಿಗೆಗೆ ಬರಲಿ ||
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟು ಇರಲಿ
ಕೃಷ್ಣ ಕೃಷ್ಣ ಎಂದು ಶಿಸ್ಟರು ಪೇಳುವ
ಅಷ್ಟಾಕ್ಷರ ಮಹಾ ಮಂತ್ರದ ನಾಮವ
ಕನಸಿನೋಳಗಾಗಲಿ ಕಳವಳಿತಾಗಲಿ
ಮನಸುಗೊಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ಚರಣ ಕಮಲವನ್ನು
ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳೋ ಹಾಂಗೆ
ಸಂತತ ಹರಿ ನಿನ್ನ ಸಾಸಿರ ನಾಮವ
ಅಂತರಂಗದ ಒಳಗಿರಿಸಿ
ಎಂತೋ ಪುರಂದರ ವಿಠಲ ರಾಯನೆ
ಅಂತ್ಯ ಕಾಲದಲ್ಲಿ ಚಿಂತಿಸೋ ಹಾಂಗೆ
No comments:
Post a Comment
Note: Only a member of this blog may post a comment.