ಒಂದು ಮುಂಜಾವಿನಲಿ...
- ಚೆನ್ನವೀರ ಕಣವಿ
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||
ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು
ಅದಕೆ ಹಿಮ್ಮೇಳವನೆ ಸೂಸಿಪಹ ಸುಳಿ ಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು
ಎಳೆವೆಣ್ಣು ಮೈದೊಳೆದು ಮಕರಂದ ಅರಿಶಿನದಿ
ಹೂ ಮುಡಿದು ಮಧು ಮಗಳ ಹೋಲುತಿತ್ತು
ಮೂಡಣದಿ ನೇಸರನ ನಗೆಮೊಗದ ಶ್ರೀಕಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು
ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತಿತ್ತು
ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂದಳದಿ
ಚಿಟ್ಟೆ ವೆಂಗಣ ಕುಣಿತ ಹಾಕುತಿತ್ತು
ಉಷೆಯ ನುಂಗದಿಬೆದಲಿ ಹರ್ಷ ಪಾರ್ಶ್ವಗಳಂತೆ
ಮರದ ಹನಿ ತಟ ಪಟನೆ ಹುದುರುತಿತ್ತು
ಶೃಷ್ಟಿ ಲೀಲೆಯಲೆಂತು ತಲ್ಲೀನವಾದ ಮನ
ಹೊಸಬಾಳ ಸವಿಗನಸು ನೆನೆಯುತಿತ್ತು
No comments:
Post a Comment
Note: Only a member of this blog may post a comment.