Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, January 16, 2013

ಘಮ ಘಮ ಘಮ್ಮಾಡಸ್ತಾವ...

  Sandeep T Gowda       Wednesday, January 16, 2013

ಘಮ ಘಮ ಘಮ್ಮಾಡಸ್ತಾವ...

-ದ.ರಾ. ಬೇಂದ್ರೆ

ಘಮ ಘಮ ಘಮ್ಮಾಡಸ್ತಾವ ಮಲ್ಲಿಗೆ
ನೀ ಹೊರಟಿದ್ದೀಗ ಎಲ್ಲಿಗೆ ? ||

ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ದುಡುಕಿ
ಕನಸು ತೇಲಿ ಬರತಾವ ಹುಡುಕಿ
ನೀ ಹೊರಟಿದ್ದೀಗ ಎಲ್ಲಿಗೆ ?

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡಿ ಹರಳ
ಮನ ಸೋತು ಆಯಿತು ಮರುಳ
ನೀ ಹೊರಟಿದ್ದೀಗ ಎಲ್ಲಿಗೆ ?

ನೆರಲ್ಲಾಡತಾವ ಮರದ ಬುಡಕ
ಕೆರಿತೆರಿ ನಗುತಾವ ದಡಕ
ಹಿಂಗ ಬಿಟ್ಟು ಇಲ್ಲಿ ನನ್ನ ನಡಕ
ನೀ ಹೊರಟಿದ್ದೀಗ ಎಲ್ಲಿಗೆ ?

ನನ್ನ ನಿನ್ನ ಒಂದು ತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ
ನೀ ಹೊರಟಿದ್ದೀಗ ಎಲ್ಲಿಗೆ ?

ಬಂತ್ಯಾಕ ನಿನಗ ಇಂಥ ಮುನಿಸು ?
ಬೀಳಲಿಲ್ಲ ನನಗ ಇದರ ಕನಸು
ರಾಯ ತಿಳಿಯಲಿಲ್ಲ ನಿನ್ನ ಮನಸು
ನೀ ಹೊರಟಿದ್ದೀಗ ಎಲ್ಲಿಗೆ ?

logoblog

Thanks for reading ಘಮ ಘಮ ಘಮ್ಮಾಡಸ್ತಾವ...

Previous
« Prev Post

No comments:

Post a Comment

Note: Only a member of this blog may post a comment.