ಹಣ್ಣೆಲೆ ಚಿಗುರಿದಾಗ (೧೯೬೮).....ಇದೇ ಹುಡುಗಿ ಇದೇ ಬೆಡಗಿ
ಚಿತ್ರ : ಹಣ್ಣೆಲೆ ಚಿಗುರಿದಾಗ
ಸಾಹಿತ್ಯ :ಆರ್.ಎನ್.ಜಯಗೋಪಾಲ್
ಸಂಗೀತ : ಎಂ.ರಂಗರಾವ್
ಗಾಯನ : ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಎಲ್.ಆರ್.ಈಶ್ವರಿ
ಡಾ.ಪಿ.ಬಿ.ಶ್ರೀನಿವಾಸ್:
ಇದೇ ಹುಡುಗಿ ಇದೇ ಬೆಡಗಿ
ಕುಡಿ ನೋಟದೆ ಸೆಳೆದಾ ಆ ಸೊಬಗಿ
ಎಲ್.ಆರ್.ಈಶ್ವರಿ:
ಇದೇ ಹುಡುಗ ಇದೇ ಸೊಬಗ
ಈ ಮೋಡಿಯ ಹೂಡಿದ ಗಾರುಡಿಗ
ಡಾ.ಪಿ.ಬಿ.ಶ್ರೀನಿವಾಸ್:
ಇದೇ ಹುಡುಗಿ ಇದೇ ಬೆಡಗಿ
ಕುಡಿ ನೋಟದೆ ಸೆಳೆದಾ ಆ ಸೊಬಗಿ
ಎಲ್.ಆರ್.ಈಶ್ವರಿ:
ಇದೇ ಹುಡುಗ ಇದೇ ಸೊಬಗ
ಈ ಮೋಡಿಯ ಹೂಡಿದ ಗಾರುಡಿಗ
ಇದೇ ಹುಡುಗ
ಒಲವೆಂಬ ನಾಟಕದ ನಾಯಕಿ ನೀನೇ
ಅವಳನ್ನು ವರಿಸುವ ನಾಯಕ ನಾನೇ
ಒಲವೆಂಬ ನಾಟಕದ ನಾಯಕಿ ನೀನೇ
ಅವಳನ್ನು ವರಿಸುವ ನಾಯಕ ನಾನೇ
ಲೇಖಕನಾರೋ ದರ್ಶಕನಾರೋ ಈ ಕಥೆಗೆ
ಲೇಖಕನಾರೋ ದರ್ಶಕನಾರೋ ಈ ಕಥೆಗೆ
ಆ ಜಾಣ ಸುಮ ಬಾಣ ಅದೇ ಮನ್ಮಥ
ಇದೇ ಹುಡುಗ ಇದೇ ಸೊಬಗ
ಇದೇ ಹುಡುಗಿ ಇದೇ ಬೆಡಗಿ
ಕುಡಿ ನೋಟದೆ ಸೆಳೆದಾ ಆ ಸೊಬಗಿ
ಇದೇ ಹುಡುಗಿ
ಬಿಗಿದಾಗ ಕೊರಳಿಗೆ ಮಂಗಳ ಸೂತ್ರ
ಬರುವೆ ನಾ ವಹಿಸಲು ನಾಯಕಿ ಪಾತ್ರ
ಬಿಗಿದಾಗ ಕೊರಳಿಗೆ ಮಂಗಳ ಸೂತ್ರ
ಬರುವೆ ನಾ ವಹಿಸಲು ನಾಯಕಿ ಪಾತ್ರ
ನಾಟಕ ನಾಳೆ ಧಾರೆಯ ವೇಳೆ ತಾನಿರಲಿ
ನಾಟಕ ನಾಳೆ ಧಾರೆಯ ವೇಳೆ ತಾನಿರಲಿ
ಅಭ್ಯಾಸ ಆರಂಭ ಇಂದೇ ಆಗಲಿ
ಇದೇ ಹುಡುಗಿ ಇದೇ ಬೆಡಗಿ
ಕುಡಿ ನೋಟದೆ ಸೆಳೆದಾ ಆ ಸೊಬಗಿ
ಇದೇ ಹುಡುಗ ಇದೇ ಸೊಬಗ
ಈ ಮೋಡಿಯ ಹೂಡಿದ ಗಾರುಡಿಗ
No comments:
Post a Comment
Note: Only a member of this blog may post a comment.