ಚಂದನದ ಗೊಂಬೆ (1979) - ಕಂಗಳು ತುಂಬಿರಲು
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಜಾನಕಿ
ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೇ..ಕಂಗಳು..
ನಿಮ್ಮ ರೂಪ ಕಣ್ಣಿನಲಿ ನಿಮ್ಮ ಮಾತೆ ಕಿವಿಗಳಲೀ
ನಿಮ್ಮ ನೋಟ ಇನ್ನೂ ನನ್ನ ಹೃದಯವೀಣೆ ಮೀಟಿರಲೂ
ನಿಮ್ಮ ಸ್ನೇಹ ಮನಸಿನಲಿ ನಿಮ್ಮ ಪ್ರೇಮ ನೆನಪಿನಲಿ
ನಿಮ್ಮ ಮುದ್ದು ಕಂದಾ ನನ್ನಾ ಅಮ್ಮಾ ಎಂದು ಕೂಗಿರಲೂ
ನೊಂದ ನನ್ನ ಜೀವ ಇಂದು ಎನೋ ಸುಖಾ ಕಾಣುತಿದೇ..ಕಂಗಳು..
ನೀವು ತಂದ ಈ ಮನೆಗೆ ನೀವು ತಂದ ಈ ಸಿರಿಗೆ
ದೂರವಾಗಿ ಎಂದೆಂದಿಗೂ ಹೋಗಲಾರೆ ನಿಮ್ಮಾಣೆಗೂ..ಆ..ಆ.
ನಿಮ್ಮ ಮನೆ ಬಾಗಿಲಿಗೆ ತೋರಣದ ಹಾಗಿರುವೇ
ನಿಮ್ಮ ಮನೆ ದೀಪವಾಗೀ ಬೆಳಗುವೆ ನನ್ನಾಣೆಗೂ
ನಿಮ್ಮ ನೆನಪಲ್ಲೇ ನನ್ನಾ ಬಾಳಾ ನಾನೂ ಸಾಗಿಸುವೇ..ಕಂಗಳು..
No comments:
Post a Comment
Note: Only a member of this blog may post a comment.