ಚಂದವಳ್ಳಿಯ ತೋಟ(1964) - ಓ ನನ್ನ ಬಾಂಧವರೇ
ಸಂಗೀತ: ಟಿ.ಜಿ.ಲಿಂಗಪ್ಪ
ಗಾಯನ: ಪಿ. ನಾಗೇಷ್ವರ ರಾವ್
ಕೃಪೆ: ಉದ್ಭವ.ಕಾಮ್
ಓ ನನ್ನ ಬಾಂಧವರೇ..ಏ ಕನ್ನಡ ಕುಲ ಪುತ್ರರೇ
ಕಣ್ಣ್ ತೆರೆದು ನೋಡಿರೊ ಈ ಬಾಳ ಕಥೆಯ
ಒಂದು ಮನೆಯದಲ್ಲ ಒಂದು ಊರಿನದಲ್ಲ
ಭಾರತಾಂಬೆಯ ಕರೆದ ಕಣ್ಣೀರ ಹೊಳೆಯ
ಸತ್ಯದ ನುಡಿಯ ಲಾಲಿಸಿರೊ ಪಾಲಿಸಿರೊ
ಸತ್ಯದ ನುಡಿಯ ಲಾಲಿಸಿರೊ ಪಾಲಿಸಿರೊ
ಸೋದರ ದ್ವೇಷ ಹೆಣ್ಣಿನ ರೋಷ ಆದಿತು ದೇಶಕೆ ಯಮ ಪಾಶ
ಸತ್ಯದ ನುಡಿಯ ಲಾಲಿಸಿರೊ ಪಾಲಿಸಿರೊ
ದಾನವನಾಗದೆ ಮಾನವನಾಗು
ಕಾಣದ ದೈವಕೆ ತಲೆ ಬಾಗು ... ೨
ಸಕಲಕು ಸುಂದರ ಶಾಂತಿಯ ಸೊಬಗು
ಪ್ರೇಮಕೆ ನೀನೆ ಶರನಾಗು
ಸತ್ಯದ ನುಡಿಯ ಲಾಲಿಸಿರೊ ಪಾಲಿಸಿರೊ
ಸುಖದಲಿ ಬಾಳಿರೊ ಸ್ವಾರ್ಥವ ಮರೆತು
ಸೋದರ ಭಾವದೆ ನೀ ಬೆರೆತು
ನಶ್ವರ ಜೀವನ ನೀನಿದ ತಿಳಿಯೊ
ಶಾಶ್ವತವೊಂದೆ ಮಾನವತೆ
ಸತ್ಯದ ನುಡಿಯ ಲಾಲಿಸಿರೊ ಪಾಲಿಸಿರೊ
ಓ ನನ್ನ ಬಾಂಧವರೆ ಕನ್ನಡ ಕುಲ ಪುತ್ರರೇ..ಏ
No comments:
Post a Comment
Note: Only a member of this blog may post a comment.