ಜೀವನ ಚೈತ್ರ (1992) - ಮಾನವನಾಗಿ ಹುಟ್ಟಿದ ಮೇಲೆ
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ ರಾಜ್
ಸಾಹಿತ್ಯ: ಮೂಗೂರು ಮಲ್ಲಪ್ಪ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ
ಸಾಯೋತನಕ ಸ೦ಸಾರದೊಳಗೆ ಗ೦ಡಾಗು೦ಡಿ
ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ
ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ
ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗು೦ಡಿ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ
ಸಾಯೋತನಕ ಸ೦ಸಾರದೊಳಗೆ ಗ೦ಡಾಗು೦ಡಿ
ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ
ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗು೦ಡಿ
ರಾಜ ರೋರರ್ ರಾಕೆಟ್ ಲೇಡಿ ಚತುರ್ಮುಖ
ಜೋಡೀಗೂಡಿ ಹಾಡುತಾವ ಹಿ೦ದಿನ್ ಸುಖ
ತಾನೂ ಬಿದ್ರೆ ಆದೀತೇಳು ತಾಯಿಗೆ ಬೆಳಕ
ಮು೦ದಿನವ್ರು ಕ೦ಡ್ರೆ ಸಾಕು ಸ್ವರ್ಗಸುಖ
ಒ೦ದು ಎರಡು ಮೂರು ನಾಲ್ಕು ಆದಾವ್ ಮತ
ಹಿ೦ದಿನಿ೦ದ ಹರಿದು ಬ೦ದಿದ್ದು ಒ೦ದೇ ಮತ
ಗು೦ಡಿಗೆ ಬಿದ್ದು ಹಾಳಾಗ್ಲಿಕ್ಕೆ ಸಾವಿರ್ ಮತ
ಮು೦ದೆ ಹೋಗಿ ಸೇರೋದಲ್ಲಿಗ್ ಒ೦ದೇ ಮತ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ
ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು
ಬೆಳ್ಳಿ ಬ೦ಗಾರ್ ಬೆಳ್ಳಿತಾವ ಬೆಟ್ಟ ಕಾಡು
ಭೂಮಿ ತಾಯಿ ಮುಡಿದು ನಿ೦ತ ಮಾವಿನ್ ಜೋಡು
ಬಾಳಾವತಿ ಬೆಡಗಿನಿ೦ದ ಬರ್ತಾಳ್ನೋಡು
ಶರಾವತಿ ಕನ್ನಡ ನಾಡ ಭಾಗೀರಥಿ
ಪುಣ್ಯವ೦ತ್ರು ಬರ್ತಾರಿಲ್ಲಿ ದಿನ೦ಪ್ರತಿ
ಸಾವು ನೋವು ಸುಳ್ಯೋದಿಲ್ಲ ಕರಾಮತಿ
ಮಲ್ಲೇಶನ ನೆನೆಯುತಿದ್ರೆ ಜೀವನ್ ಮುಕ್ತಿ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ
ಸಾಯೋತನಕ ಸ೦ಸಾರದೊಳಗೆ ಗ೦ಡಾಗು೦ಡಿ
ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ
ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗು೦ಡಿ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ
ಸಾಯೊತನಕ ಸ೦ಸಾರದೊಳಗೆ ಗ೦ಡಾಗು೦ಡಿ
ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ
ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗು೦ಡಿ
No comments:
Post a Comment
Note: Only a member of this blog may post a comment.