ನೀನೆ ಬರೀ ನೀನೆ( 2009) - ಬಾ ನೋಡು ಗೆಳತಿ
ಚಿತ್ರಗೀತೆ | ಜಯಂತ ಕಾಯ್ಕಿಣಿ | ನೀನೆ ಬರಿ ನೀನೆ | ೨೦೦೯
ಬಾ ನೋಡು ಗೆಳತೀ ನವಿಲು ಗರಿಯು ಮರಿ ಹಾಕಿದೇ
ಕಣ್ಣಾ ಮುಚ್ಚಾಲೆ ಆಡುತಾ... ಅಡಗೀ ನೀನೆಲ್ಲೊ ಹೋದೆಯಾ..
ನಾ ಅರಸುತಿರುವೆನು .. ಇನ್ನೂ.. ನೀ ಕಾಣಲಾರೆಯಾ ||ಪ||
ನಾನು ನೀನು ಸೇರಿ ತಿ೦ದ ಬೋರೆಹಣ್ಣು ಎಲ್ಲಿದೇ
ಕದ್ದು ಹಚ್ಚಿಕೊ೦ಡ ಸ್ವಾದ ಹಾಗೆ ಇನ್ನು ಇಲ್ಲಿದೆ
ಲ೦ಗದಲ್ಲಿ ಹೆಕ್ಕಿ ತ೦ದ ಪಾರಿಜಾತ ಚೆಲ್ಲಿದೆ
ಬಾ ಹೊಳೆಯ ತು೦ಬಾ ಹನಿವ ಮಳೆಯಾ ದನಿ ಮೂಡಿದೆ || ೧ ||
ನಾನು ನೀನು ಸೇರಿ ಕ೦ಡ ತೇರು ಅಲ್ಲಿ ನಿ೦ತಿದೆ
ಊರ ಜಾತ್ರೆಯಲ್ಲಿ ಈಗ ಬೇರೆ ವೇಶ ಬ೦ದಿದೆ
ನೀನು ಬೇಕು ಎ೦ದ ಹೂವು ಜೇಬಿನಲ್ಲೆ ಕು೦ತಿದೆ
ಈ ಅಲೆವ ಮನಕೆ .. ನಿನ್ನ ನೆನಪು ಅತಿಯಾಗಿದೆ || ೨ ||
No comments:
Post a Comment
Note: Only a member of this blog may post a comment.