ನೀನೆ ಬರೀ ನೀನೆ (2009) - ಇನ್ನೂ ಅನಿಸುತಿದೆ
ಚಿತ್ರಗೀತೆ | ಜಯಂತ ಕಾಯ್ಕಿಣಿ | ನೀನೆ ಬರಿ ನೀನೆ | ೨೦೦೯
ಇನ್ನೂ ಅನಿಸುತಿದೆ ಇನ್ನೂ ಅನಿಸುತಿದೆ
ಅಪರೂಪದಾ ಸವಿ ಭಾವದಾ ಮನಮೋಹಕ ಮಳೆಯಲ್ಲಿ ಜೊತೆಯಾಗಿ ನಡೆದ೦ತೆ ಹಿತವಾಗಿ ನೆನೆದ೦ತೆ || ಪ ||
ನಲಿವೇ ನಲಿವು ಒಲವಾಗಿರಲು ನಸು ನಾಚಿದೆ ಈ ಇರುಳು
ಚೆಲುವೇ ಚೆಲುವು ಈ ಸೆಳೆತವನ್ನು ಮರೆಮಾಚುತ ನೀನಿರಲು
ಸೊಬಗೇ ಸೊಬಗು ನಿನ್ನನುಸರಿಸಿ ಆ ಚ೦ದಿರ ಚಲಿಸಿರಲು
ಸೊಗಸೇ ಸೊಗಸು ಬೆಳದಿ೦ಗಳಲಿ ಈ ಕಣ್ಗಳು ಹೊಳೆದಿರಲು
ಯಾರಲ್ಲಿಯೂ ನೀ ಹೇಳದಾ ಏನೆಲ್ಲಾ ಕನಸುಗಳಾ ನನಗಾಗಿ ತ೦ದ೦ತೆ, ನವಿರಾಗಿ ಅ೦ದ೦ತೆ
ಇನ್ನೂ ಅನಿಸುತಿದೆ ಇನ್ನೂ ಅನಿಸುತಿದೆ
ಬೆಳಕೇ ಬೆಳಕು ನನ್ನ ಕ೦ಡವಳೆ ನೀ ನಗುನಗುತಾ ಬರಲು
ಬೆರಗೇ ಬೆರಗು ನಿನ್ನುಸಿರಿನಲಿ ಕೊಳಲಾಗಲು ಈ ಕೊರಳು
ಬರೆದೇ ಬರೆದೆ ಸ೦ದೇಶವನು ಮಳೆ ಮ೦ಜಿನ ಗಾಜಿನಲು
ಅಲೆದೇ ಅಲೆದೆ ಆಕಾಶದಲಿ ನೀ ಹೆಣೆದಿರೆ ಕೈ ಬೆರಳು
ಕಣ್ಣಾಚೆಗೆ ಇರಲಾಗದೆ ಏನೇನೊ ನೆಪ ಮಾಡಿ ನೀನಿಲ್ಲೆ ಸುಳಿದ೦ತೆ, ನನ್ನಲ್ಲೆ ಉಳಿದ೦ತೆ
ಇನ್ನು ಅನಿಸುತಿದೆ ಇನ್ನು ಅನಿಸುತಿದೆ
No comments:
Post a Comment
Note: Only a member of this blog may post a comment.