Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, April 25, 2012

ನೀನೆ ಬರಿ ನೀನೆ (2009) - ಇದೆಯೆ ನಿನಗೆ ಸಮಯ‌

  Sandeep T Gowda       Wednesday, April 25, 2012

ನೀನೆ ಬರಿ ನೀನೆ (2009) - ಇದೆಯೆ ನಿನಗೆ ಸಮಯ‌

ಚಿತ್ರಗೀತೆ | ಜಯಂತ ಕಾಯ್ಕಿಣಿ | ನೀನೆ ಬರಿ ನೀನೆ | ೨೦೦೯
ಸಂಗೀತ : ಮನೋಮೂರ್ತಿ
ಗಾಯನ : ಸೋನು ನಿಗಮ್

ಇದೆಯೆ ನಿನಗೆ ಸಮಯ‌
ಇದೆಯೆ ನಿನಗೆ ಸಮಯ‌
ಅಲೆದಾಡಲಿಕೆ... ಜೊತೆ ಹಾಡಲಿಕೆ..
ಚಂದ್ರನ ನೋಡಲಿಕೆ.. ನಿನಗೆ ಸಮಯ.. || ಇದೆಯೆ ||

ಧ್ಯಾನವ ಕಲಿತೆನೂ, ದಾರಿಯ ಕಾಯುತಾ..
ದಾಹವ ಮರೆತೆನೂ, ನಿನ್ನಯ ಮೋಹಿತಾ.. ನೀ ಕೇಳಲಾರೆಯ..
ನೆನೆದಾಕ್ಷಣವೆ ಕರೆ ಮಾಡಲಿಕೆ.. ಕಾಗದ ಓದಲಿಕೆ, ನಿನಗೆ ಸಮಯ.. || ಇದೆಯೆ ||

ಗಣಿತವ ಕಲಿತೆನೂ, ನೆನಪನು ಎಣಿಸುತಾ..
ಮೈಮನ ಅರಿತೆನೂ, ಕನಸನು ಗುಣಿಸುತಾ.. ನೀ ಕಾಣಲಾರೆಯ..
ತಡಮಾಡಿದರೆ ಜಗಳಾಡಲಿಕೆ, ರಾಜಿಯ ಮಾಡಲಿಕೆ.. ನಿನಗೆ ಸಮಯ.. || ಇದೆಯೆ||
logoblog

Thanks for reading ನೀನೆ ಬರಿ ನೀನೆ (2009) - ಇದೆಯೆ ನಿನಗೆ ಸಮಯ‌

Previous
« Prev Post

No comments:

Post a Comment

Note: Only a member of this blog may post a comment.