ನೀನೆ ಬರಿ ನೀನೆ (2009) - ನಿನ್ನ ಹಿಂದೆಯೆ, ಹಿಂದೆಯೆ
ಚಿತ್ರಗೀತೆ | ನೀನೆ ಬರಿ ನೀನೆ | ೨೦೦೯
ಆಲ್ಬಮ್ : ನೀನೆ ಬರಿ ನೀನೆ
ಗಾಯಕ : ಸೋನು ನಿಗಮ್
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ : ಮನೋಮೂರ್ತಿ
ನಿನ್ನ ಹಿಂದೆಯೆ, ಹಿಂದೆಯೆ
ಬರುವೆ ನಾನು
ಇನ್ನು ಮೆಲ್ಲಗೆ, ಮೆಲ್ಲಗೆ
ಚಲಿಸು ನೀನು...
ನಿಂತರೆ ನೀ, ನಿಲ್ಲುವೆನು
ಕಾಣದೆ ಹೋದರೆ, ಬೇಯುವೆನು
ನಿನಗಾಗಿ ಕಾಯುವೆನು..... || ನಿನ್ನ ಹಿಂದೆಯೆ ||
ಈ ದಾರಿಯ ಮರಗಳ ಬಿಸಿಲು ಕೋಲು
ನೀ ನಡೆದರೆ ಹೊಳೆಯುವ ಕವಿತೆ ಸಾಲು
ಏನೊ ಮರೆತಂತೆ ನಿಂತು ನೀನೊಮ್ಮೆ
ಹೊರಳಿ ನೋಡೆನ್ನನು
ನಿನಗಾಗಿ ಕಾಯುವೆನು... || ನಿನ್ನ ಹಿಂದೆಯೆ ||
ಆ ಚಂದಿರ ಸೋತನು ಮೂಡಿ ಮೂಡಿ
ನೀ ಬಾರದ ದಾರಿಯ ನೋಡಿ ನೋಡಿ
ನಿನ್ನ ಮನಸಲ್ಲೆ ನನ್ನ ವಿಳಾಸ ಕಂಡು
ನಾ ನಿಂತೆನು
ನಿನಗಾಗಿ ಕಾಯುವೆನು... || ನಿನ್ನ ಹಿಂದೆಯೆ ||
No comments:
Post a Comment
Note: Only a member of this blog may post a comment.