ಚಿತ್ರ: ಮರೆಯದ ಹಾಡು
ಗಾಯನ: ಎಸ್ ಜಾನಕಿ
ಸುಖದ ಸ್ವಪ್ನ ಗಾನ, ಎದೆಯ ಆಸೆ ತಾನ
ಒಲವ ಭಾವ ವೀಣಾ.....
ನೀ ಮಿಡಿಯೆ ನಾ ನುಡಿಯೇ ಅದುವೇ ಜೀವನ, ಅದುವೇ ಜೀವನ
ಸ್ವರವೇಳು ಕಲೆತ ರಾಗ, ಸಂಪೂರ್ಣ ಜೀವ ರಾಗ
ಉಸಿರೆರೆಡು ಬೆರೆತ ವೇಗ, ಅನುರಾಗ ಭಾವಯೋಗ
ಜನುಮ ಜನುಮದ ಬಂಧ, ಅನುಬಂಧ ನಮ್ಮದು
ತಪಸಿನ ಫಲವಿದು, ದೈವದ ವರವಿದು.....
ಓ......ಆ....
ಸವಿ ಮುರಳಿ ಕರೆದ ವೇಳೆ, ಆ ರಾಧೆ ಓಡಿದಂತೆ
ಮಾಧವನ ನೆನಪಿನಲ್ಲಿ, ಆ ಮೀರಾ ಹಾಡಿದಂತೆ
ನಿನ್ನೊಲವಿನಲ್ಲಿ ಮಿಂದು, ನಾನಿಂದು ಹಾಡುವೆ
ನನ್ನನೆ ಮರೆಯುವೆ, ನಿನ್ನಲೆ ಬೆರೆಯುವೆ
ಆ .....
ಶ್ರುತಿ ಲಯದ ಮಿಲನದಲ್ಲಿ, ದೈವೀಕನಾದ ಲೀಲೆ
ಸತಿಪತಿಯ ಒಲವಿನಲ್ಲಿ, ಸಂಸಾರ ನೌಕೆ ತೇಲೆ
ನೆನಪಿನ ತೋಟದ ಮಲ್ಲೆ, ಹೂಮಾಲೆ
ಬಾಡದ ಹೂವಿದು, ಮುಗಿಯದ ಹಾಡಿದು......
ಆ......
nice song n website too
ReplyDelete