ಚಿತ್ರ: ಶ್ರಾವಣ ಬಂತು
ಗಾಯನ: ರಾಜ್ ಕುಮಾರ್, ವಾಣಿ ಜಯರಾಂ
ನಟರು: ರಾಜ್ ಕುಮಾರ್, ಊರ್ವಶಿ, ಶ್ರೀನಾಥ್
ಆ...ದಪದಮ
ಆ....ರಿಸರಿದ
ಆ....ಮನಿಸದ ಮಪದ ಮಪಮರಿ
ಇದೆ ರಾಗದಲ್ಲಿ ಇದೆ ತಾಳದಲ್ಲಿ
ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಆ ಯಮುನೆಯಲ್ಲಿ ಅಲೆಅಲೆಯು ಹೊಮ್ಮಿ
ಸಂತೋಷದಿಂದ ಬಾನೆಡೆಗೆ ಚಿಮ್ಮಿ
ಆ ಇರುಳಿನಲಿ ಆ ನೀರಹನಿ ಕಾಲ್ಗೆಜ್ಜೆ ದನಿ ಮಾಡಿರಲು
ಬೆರಗಾದ ಚಂದ್ರನು ಮೈಮರೆತ ಶ್ಯಾಮ
ಪ....ದಪದಮ ಮರಿಪಮಪದ ಸದರಿಸ
ಆ...ಪಮರಿಸಗರಿಸ ದದಪಮ ಪಸದ
ಪಮರಿಸದ ಸಸದಪಮ ಪಡಸ
ಸ, ರಿಮಪದಮಪದ x3
ಮಧುಮಾಸವೆಂದು ಮಾಮರವು ತೂಗಿ
ಕೊಳಲಂತೆ ಆಗ ಕೋಗಿಲೆಯು ಕೂಗಿ
ಆಕಾಶದಲಿ ತೇಲಾಡುತಿಹ ಆ ಮೋಡಗಳು ಬೆರಗಾಗಿ
ಕಾಲ ಮರೆತು ಹೋದವು ಭುವಿಗೆ ಜಾರಿ ಬಂದವು
ಇದೆ ರಾಗದಲ್ಲಿ ಇದೆ ತಾಳದಲ್ಲಿ
ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
No comments:
Post a Comment
Note: Only a member of this blog may post a comment.