ಚಿತ್ರ: ರಾಜ ನನ್ನ ರಾಜ
ಹಾಡಿದವರು: ರಾಜ್ ಕುಮಾರ್, ಎಸ್ ಜಾನಕಿ
ನಟರು: ರಾಜ್ ಕುಮಾರ್, ಆರತಿ
ತನುವು ಮನವು ಇಂದು ನಿಂದಾಗಿದೆ
ಆಸೆಯು ಎದೆಯ ತುಂಬಾ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ ಇದೇನೋ....
ಆ... ಅನುದಿನವು ಅನುಕ್ಷಣವು ಜೊತೆಯಿರಲು ನೀನು
ನಲ್ಲ, ಸರಸದಲಿ ಸುಖಪಡುವೆ ನಾ ಕಾಲವೆಲ್ಲ
ನಾ ಪ್ರೇಮದ ಕಾಣಿಕೆ ನೀಡುವೆ.....
ಈ... ಯುಗವುರುಳಿ ಯುಗ ಬರಲಿ ಪ್ರತಿ ಜನುಮದಲ್ಲೂ,
ನಲ್ಲೆ, ಬೆರೆತಿರುವ ಜೀವಗಳು ಎಂದೆಂದೂ ಒಂದು
ಈ ಮಾತಿನ ಮೋಡಿಗೆ ಸೋತೆನು.....
ಆ....ಮೋಡಗಳು ಮಿಂಚುಗಳ ಮಾಲೆಯನು ಹಾಕಿ
ಇಂದು ಮಳೆಹನಿಯ ಸುರಿಸುತಲಿ ಹರಸುತಿವೆ ನೋಡು
ನಾ ಮರೆಯದ ರಾತ್ರಿ ಈ ವೇಳೆಯು.....
No comments:
Post a Comment
Note: Only a member of this blog may post a comment.