ಚಲನಚಿತ್ರ: ಆಟೋರಾಜ
ನಟಿಸಿದವರು: ಶಂಕರ್ ನಾಗ್, ಗಾಯಿತ್ರಿ
ಹಾಡಿದವರು: ಎಸ್ ಪಿ ಬಾಲು
ನಲಿವ ಗುಲಾಬಿ ಹೂವೆ ಮುಗಿಲ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೋ ಬರಿಯೇ ನನ್ನಲ್ಲಿ ಛಲವೋ....
ನಲಿವ ಗುಲಾಬಿ ಹೂವೆ ಒಲವೋ ಛಲವೋ.....
ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ ಸೆಳೆಯುತ ಕುಣಿದೆ ಸೊಗಸಾಗಿ ಹಿತವಾಗಿ
ಮನವ ನೀ ಸೇರಲೆಂದೆ ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ, ಇಂದೇಕೆ ದೂರಾದೆ?
ಹೀಗೇಕೆ ಮರೆಯಾದೆ?....
ಸುಮವೇ ನೀ ಬಾಡದಂತೆ ಬಿಸಿಲ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ ಎಂದೆಂದೂ ಎಂದೆಂದೂ
ಇರು ನೀ ಹಾಯಾಗಿ ಹೀಗೆ ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೇ ನಿನಗಾಗಿ ನನಗಾಗಿ.....
No comments:
Post a Comment
Note: Only a member of this blog may post a comment.