Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, January 17, 2012

ಲೈಫ಼ು ಇಷ್ಟೇನೆ - ಮಾಯಾವಿ, ಮಾಯಾವೀ...

  Sandeep T Gowda       Tuesday, January 17, 2012
ಚಿತ್ರಗೀತೆ | ಜಯಂತ ಕಾಯ್ಕಿಣಿ | ಲೈಫು ಇಷ್ಟೇನೇ | ೨೦೧೧

ಮಾಯಾವಿ, ಮಾಯಾವೀ...ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗು ಮುನ್ನ...

ಮೂರು ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು.

ಹೃದಯವಿದು ಕಾದಿದೆ ಓಡಲು ನಿನ್ನೊಂದಿಗೆ,
ಒಲವಿನಲಿ ಈಗಲು ಬೀಳದೆ ಇನ್ನೆಂದಿಗೆ...

ನಯನಗಳ ಸಂಭಾಷಣೆ, ಪುಳಕಗಳ ಸಂಪಾದನೆ,
ಬಯಕೆಗಳ ಸಂಶೋಧನೆ ನುಡಿಸಬೆಕು ನೀನು....

ಕನಸಿನಲಿ ಮಾತಾಡಲು, ಎಳೆದಕಡೆ ಓಡಾಡಲು,
ನೆನಪುಗಳ ಕಾಪಾಡಲು, ಕಲಿಯಬೇಕು ನೀನು....

ಇಡಬಹುದೆ ಆಸೆಯಾ, ಠೇವಣಿ ನಿನ್ನೊಂದಿಗೆ?
ಪಿಸುನುಡಿಯ ಇಗಲು, ಕೇಳದೇ ಇನ್ನೆಂದಿಗೆ...

ಓ... ನಿನಗೆ ನಾನು ಬೇಕೆ?, ನಿನಗೂ ನಾನೆ ಬೇಕೆ?.

ಮಾಯಾವಿ, ಮಾಯಾವೀ...ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗು ಮುನ್ನ...

ಮೂರೆ ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು.....

ಮೊದಲಸಲ ಕಂಡಾಗಲೆ, ವಿರಹದಲಿ ಬೆಂದಾಗಲೆ,
ಸರಸದಲಿ ಮಿಂದಾಗಲೆ ಒಲಿದೆ ಎನು ನೀನು?

ಮಿಡಿತವನು ಕದ್ದಾಲಿಸಿ, ಲಹರಿಗಳ ಸಂಭಾಲಿಸಿ,
ಸೆಳೆತವನು ಹಿಂಬಾಲಿಸಿ ಬರುವೆ ಏನು ನೀನು?

ಮಾಯಾವಿ, ಮಾಯಾವೀ...ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗು ಮುನ್ನ...

ಮೂರೆ ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು...

ಹೃದಯವಿದು ಕಾದಿದೆ ಓಡಲು ನಿನ್ನೊಂದಿಗೆ,
ಒಲವಿನಲಿ ಈಗಲು ಬೀಳದೆ ಇನ್ನೆಂದಿಗೆ...

ನನಗೆ ನೀನು ಬೇಕಿ, ನನಗೂ....!!!
logoblog

Thanks for reading ಲೈಫ಼ು ಇಷ್ಟೇನೆ - ಮಾಯಾವಿ, ಮಾಯಾವೀ...

Previous
« Prev Post

No comments:

Post a Comment

Note: Only a member of this blog may post a comment.