ಚಲನಚಿತ್ರ: ಮೊಗ್ಗಿನ ಮನಸ್ಸು
ಹಾಡಿದವರು: ಶ್ರೇಯ ಘೋಶಾಲ್
ನಟಿಸಿರುವವರು: ರಾಧಿಕ ಪಂಡಿತ್, ಯಶ್ ಮತ್ತು ಇತರರು
ಮಳೆ ಬರುವ ಹಾಗಿದೆ ಮನವೀಗ ಹಾಡಿದೆ
ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ
ಸವಿಗನಸು ಕಾಡಿದೆ ನಸುನಗುವು ಮೂಡಿದೆ
ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ
ನಿನ್ನ ನಗುವಿನಲ್ಲೇ ನನ್ನ ನಸುಕು
ನಿನ್ನ ರೂಪಧರಿಸಿ ಬಂದು ನಲಿದಾಡಿದೆ ಬೆಳಕು
ಗೆಳೆಯ ನೀನು ಬಳಿಯೇ ಅನುಕ್ಷಣವು ಬೇಕಾಗಿದೆ
ದಿನಕೆ ನೂರು ಬಾರಿ ನೀನು ಪ್ರೀತಿ ಹೇಳಬೇಕಿದೆ
ಎದೆಯ ಬಾಗಿಲಲ್ಲೇ ನಿನ್ನ ಸುಳಿವು
ಸಣ್ಣ ಆಸೆಯಲ್ಲೇ ನಮ್ಮ ಸಹವಾಸದ ನಲಿವು
ಇನಿಯ ನಮ್ಮ ಒಲವು ಮೆರವಣಿಗೆ ಹೊರಟಾಗಿದೆ
ಮರೆತ ಹಾಗೆ ಚೂರು ನಟಿಸಿ ನಿನ್ನ ಕಾಡಬೇಕಿದೆ.......
No comments:
Post a Comment
Note: Only a member of this blog may post a comment.