Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Saturday, January 21, 2012

ಓಂಕಾರದಿ ಕಂಡೆ ಪ್ರೇಮ ನಾದವ

  Sandeep T Gowda       Saturday, January 21, 2012
ಚಿತ್ರ: ನಮ್ಮೂರ ಮಂದಾರ ಹೂವೆ
ಗಾಯನ: ಚಿತ್ರ ಕೆ ಎಸ್
ನಟರು: ಪ್ರೇಮ, ರಮೇಶ್, ಶಿವರಾಜ್ ಕುಮಾರ್

ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾಳದಿ ತಂದೆ ನೀ ಶುಭೋದಯ
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ
ಸೌಗಂಧಹಾಸ ಚೆಲ್ಲಿ ನಿನ್ನ ಕಾದಿದೆ
ಅರಿಯೋ ಇನಿಯ ಒಲವ ಕರೆಯ.....

ಮಧುರ ತಾನ ಸ್ವರಗಳ ಸೇರಿ......ಒಹೊಹೊಹೊಹೋ ಓಹೊಹೊಹೋಹೋ
ಜಲಲ ಧಾರೆ ಜಲದಲಿ ಜಾರಿ......ಓಹೊಹೊಹೋಹೋ ಒಹೊಹೊಹೊಹೋ
ಆಕಾಶದಾಚೆ ಆ ಮೌನದಿ ಆ ತಾರೆಯೇಕೆ ತಾನ್ ತೇಲಿದೆ
ಬಂದಾಗ ಅರಿವು ಇಲ್ಲಿ ತಂದಿತು ಒಲವು ಅಲ್ಲಿ
ಅರಿಯೋ ಇನಿಯ ಒಲವ ನಿಧಿಯ......

ನಿನದೆ ಗಾನ ಹೃದಯದಿ ತೇಲಿ.....ಒಹೊಹೊಹೊಹೋ ಓಹೊಹೊಹೋಹೋ
ಲಯದಿ ರಾಗ ಅಲೆಗಳ ಬೀರಿ......ಒಹೊಹೊಹೊಹೋ ಓಹೊಹೊಹೋಹೋ
ಈ ಗೀತೆಗಾದೆ ನೀ ಭಾವನ ಈ ಬಾಳಿಗಾದೆ ನೀ ಚೇತನ
ಸಂಗೀತ ಸುಧೆಯ ತುಂಬಿ ಮಾಧುರ್ಯ ಮನದಿ ತಂದೆ
ಅರಿಯೋ ಇನಿಯ ಒಲವ ಸವಿಯ.....
logoblog

Thanks for reading ಓಂಕಾರದಿ ಕಂಡೆ ಪ್ರೇಮ ನಾದವ

Previous
« Prev Post

No comments:

Post a Comment

Note: Only a member of this blog may post a comment.