Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Monday, January 23, 2012

ಯಾವ ಕವಿಯು ಬರೆಯಲಾರ‌

  Sandeep T Gowda       Monday, January 23, 2012
ಚಿತ್ರ : ಭಾಗ್ಯದ ಲಕ್ಷ್ಮೀ ಬಾರಮ್ಮ
ಸಂಗೀತ : ಸಿಂಗೀತಂ ಶ್ರೀನಿವಾಸರಾವ್
ರಚನೆ : ಚಿ. ಉದಯಶಂಕರ್
ಗಾಯಕರು : ಡಾ. ರಾಜಕುಮಾರ್
ನಟರು: ಡಾ. ರಾಜಕುಮಾರ್, ಮಾಧವಿ

ಯಾವ ಕವಿಯು ಬರೆಯಲಾರ‌
ಒಲವಿನಿಂದ, ಕಣ್ಣೋಟದಿಂದ‌
ಹೃದಯದಲ್ಲಿ ನೀ ಬರೆದ‌
ಈ ಪ್ರೇಮ ಗೀತೆಯ..

ಯಾವ ಕವಿಯು ಬರೆಯಲಾರ...

ನಿನ್ನ ಕವಿತೆ ಎಂಥ ಕವಿತೆ
ರಸಿಕರಾಡೊ ನುಡಿಗಳಂತೆ
ಮಲ್ಲೆ ಹೂವು ಅರಳಿದಂತೆ
ಚಂದ್ರಕಾಂತಿ ಚೆಲ್ಲಿದಂತೆ
ಜೀವ ಜೀವ ಅರಿತು ಬೆರೆತು
ಸುಖವ ಕಾಣುವಂತೆ...

ಯಾವ ಕವಿಯು

ಪ್ರೇಮ ಸುಮವು ಅರಳುವಂತೆ
ಪ್ರಣಯ ಗಂಧ ಚೆಲ್ಲುವಂತೆ
ಕಂಗಳೆರಡು ದುಂಬಿಯಾಗಿ
ಭ್ರಮರಗೀತೆ ಹಾಡಿದಂತೆ
ಜೇನಿಗಾಗಿ ತುಟಿಗಳೆರಡು
ಸನಿಹ ಸೇರಿದಂತೆ...

ಯಾವ ಕವಿಯು
logoblog

Thanks for reading ಯಾವ ಕವಿಯು ಬರೆಯಲಾರ‌

Previous
« Prev Post

No comments:

Post a Comment

Note: Only a member of this blog may post a comment.