Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Monday, January 23, 2012

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು

  Sandeep T Gowda       Monday, January 23, 2012
ಚಿತ್ರ: ನ್ಯಾಯವೇ ದೇವರು
ಗಾಯಕರು: ಪಿ.ಬಿ. ಶ್ರೀನಿವಾಸ್
ರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ನಟರು: ಡಾ ರಾಜಕುಮಾರ್, ಬಿ ಸರೋಜಾದೇವಿ

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ
ಈ ಜೀವ ನಿನಗಾಗಿ

ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ ಜೊತೆಗೂಡಿ ನಾ ಬರುವೆ
ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ
ನೀನಡಿಯ ಇಡುವೆಡೆಯೇ ಒಲವಿನ ಹೂಹಾಸುವೆ
ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೇ ಸಾಕ್ಷಿ
ಇನ್ನಾದರೂ ನನ್ನ ನಂಬಿ ನಗೆಯ ಚೆಲ್ಲು ಚೆಲುವೆ

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು

ಹಸೆಮಣೆಯು ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆರಂಗು ಆರತಿಯಾಯ್ತು
ಇನ್ನ್ನೀಗ ಎರಡೂ ಜೀವ ಬೆರೆತು ಸ್ವರ್ಗವಾಯ್ತು

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
logoblog

Thanks for reading ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು

Previous
« Prev Post

No comments:

Post a Comment

Note: Only a member of this blog may post a comment.