ಚಿತ್ರ: ಯುಗಪುರುಷ
ಹಾಡಿದವರು: ಎಸ್ ಪಿ ಬಾಲು
ನಟರು: ರವಿಚಂದ್ರನ್, ಖುಷ್ಬೂ
ನಿಸಗರಿಸ.........
ಈ ತಾಳ ಇದ್ದರೆ, ಹಾಡು ಬಾರದೆ
ಈ ಹಾಡು ಇದ್ದರೆ ನಿದ್ದೆ ಬಾರದೆ
ಈ ನಿದ್ದೆ ಬಂದರೆ, ಕನಸು ಬಾರದೆ
ಆ ಕನಸಿನಲ್ಲಿ ಈ ಬೊಂಬೆ ಕಾಣದೆ
ಯಾವುದೋ ಈ ಬೊಂಬೆ ಯಾವುದೋ
ಊರ್ವಶಿಯ ಕುಲವೋ ಮೇನಕೆಯ ಚೆಲುವೋ
ಯಾವುದೋ ಈ ಅಂದ ಯಾವುದೋ
ಬೇಲೂರಿನ ಶಿಲೆಯೋ ಶಾಂತಲೆಯ ಕಲೆಯೋ
ಕಾಳಿದಾಸನ ಪ್ರೇಮಗೀತೆಯೋ
ಕಾಳಿದಾಸನ ಪ್ರೇಮಗೀತೆಯೋ
ನೂರಾರು ಹೂಗಳಿದ್ದರು ಈ ಅಂದ ಬೇರೆ
ಆ ತಾರೆ ಮಿನುಗುತಿದ್ದರು ಈ ಕಣ್ಣೆ ಬೇರೆ...ನೀನ್ಯಾರೆ
ನೀನಿಲ್ಲಿ ಸುಮ್ಮನಿದ್ದರು ಒಳಮಾತೆ ಬೇರೆ
ಹಾಡಲ್ಲೆ ನೀನು ಇದ್ದರು, ಎದುರಿರುವ ತಾರೆ....ಹಲೋ ನೀನ್ಯಾರೆ?
ನನ್ನ ಮನದ ಪ್ರೇಮ ರಾಗಕೆ ನಿನ್ನ ಎದೆಯ ತಾಳ ಇದ್ದರೆ
ನಾನು ಹಾಡೋ ನೂರು ಭಾವಕೆ ನೀನು ಒಮ್ಮೆ ನೋಡಿ ನಕ್ಕರೆ ಸಾಕು.....
ಲಲಲಲ.....
ನೀನ್ಯಾರೋ ತಿಳಿಯದಿದ್ದರೂ ನನಗೆ ನೀ ರಾಧೆ
ಕಲ್ಲಾಗಿ ನಾನು ನಿಂತರು ಕರಗಿ ನೀರಾದೆ...ಏಕಾದೆ
ಈ ಹಾಡು ನಿನ್ನದಾದರೂ ರಾಗ ನಾನಾದೆ
ಯಾರೇನು ಹೇಳದಿದ್ದರೂ ನನಗೆ ಜೊತೆಯಾದೆ...ಹೇಗಾದೆ
ಇಂದು ನೆನ್ನೆ ನಾಳೆ ಯಾವುದು ನನಗೆ ಈಗ ನೆನಪು ಬಾರದು
ನಿನ್ನ ಬಿಟ್ಟು ನನ್ನ ಮನಸಿದು ಬೇರೆ ಏನು ಕೇಳಲಾರದು ರಾಧೆ........
ಲಲಲಲಲ.......
No comments:
Post a Comment
Note: Only a member of this blog may post a comment.