ಚಿತ್ರ: ದೇವತಾ ಮನುಷ್ಯ
ಹಾಡಿದವರು: ರಾಜ್ ಕುಮಾರ್, ಬಿ ಆರ್ ಛಾಯ
ನಟರು: ರಾಜ್ ಕುಮಾರ್, ಸುಧಾ ರಾಣಿ, ಗೀತ
ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ
ಮುಳ್ಳಲ್ಲಾದರು ನೂಕು ಕಲ್ಲಲ್ಲಾದರು ನೂಕು ರಾಘವೇಂದ್ರ
ಮುಳ್ಳಲ್ಲಿ ಮುಳ್ಳಾಗಿ ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ ರಾಘವೇಂದ್ರ
ಬಿಸಿಲಲ್ಲೇ ಒಣಗಿಸು ನೆರಳಲ್ಲೇ ಮಲಗಿಸು ರಾಘವೇಂದ್ರ
ಬಿಸಿಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ ನಗುನಗುತಾ ಇರುವೆ ರಾಘವೇಂದ್ರ
ಆ.....
ಸುಖವನ್ನೇ ನೀಡೆಂದು ಎಂದು ಕೇಳೆನು ನಾನು ರಾಘವೇಂದ್ರ....ಆ....
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ನೀನೆ ಹೇಳು ರಾಘವೇಂದ್ರ
ಎಲ್ಲಿದ್ದರೇನು ನಾ ಹೇಗಿದ್ದರೇನು ನಾ ರಾಘವೇಂದ್ರ
ನಿನ್ನಲ್ಲಿ ಶರಣಾಗಿ ನೀನನ್ನ ಉಸಿರಾಗಿ ಬಾಳಿದರೆ ಸಾಕು ರಾಘವೇಂದ್ರ.....
No comments:
Post a Comment
Note: Only a member of this blog may post a comment.