Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, January 20, 2012

ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ

  Sandeep T Gowda       Friday, January 20, 2012
ಚಿತ್ರ: ನೆನಪಿರಲಿ
ಹಾಡಿದವರು: ಚಿತ್ರ, ಚೇತನ್
ನಟರು: ಪ್ರೇಮ್, ವರ್ಷ, ವಿದ್ಯಾ

ಹೇ ಜೀವಗಳ ಒಲವೆ
ಹೇ ಭಾವಗಳ ವನವೇ
ನೀವಿರದೆ ನಾನಿಲ್ಲ
ನಾನಿರದೇ ನೀವಿಲ್ಲ
ಪ್ರೀತಿ ನನ್ನ ಹೆಸರು....ನೆನಪಿರಲಿ ನೆನಪಿರಲಿ....

ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ
ಒಂಟಿ ರೆಕ್ಕೆಯಲ್ಲಿ ಹಾರಬಲ್ಲ ಹಕ್ಕಿಯಲ್ಲ ಒಂಟಿ ಪ್ರೇಮಿಯಲ್ಲ
ಹೂವು ದುಂಬಿ ಹಾಡು ಅದು..... ನೆನಪಿರಲಿ ನೆನಪಿರಲಿ.....

ಪ್ರೀತಿ ಪಾಠವಲ್ಲ, ಪ್ರಣಯದೂಟವಲ್ಲ
ಮಧುರ ಪದಗಳ ಪ್ರಾಸಬದ್ಧ ಹಾಡು ಅಲ್ಲ ಬರಿ ಮುತ್ತು ಅಲ್ಲ
ಕಾಣಿಸದ ಕಾವ್ಯ ಅದು....ನೆನಪಿರಲಿ ನೆನಪಿರಲಿ.....

ಪ್ರಾಯದ ಮೇಲೆ ದಿಬ್ಬಣ ಹೊರಟು ಜೀವನವ ಸುತ್ತಿ
ಕಹಿಯನ್ನೆಲ್ಲಾ ಸವಿಯುವುದನ್ನು ಕಲಿಸುವುದೇ ಪ್ರೀತಿ
ಮೋರೆಗಳನ್ನು ಕೋರೆಗಳನ್ನು ಮನ್ನಿಸಿ ಮುದ್ದಿಸಿ
ಎಲ್ಲ ಸುಂದರವೆಂದು ನೋಡೋ ಒಳಗನ್ಣೆ ಪ್ರೀತಿ
ನಿದಿರೆಯಾದರು ಅಲ್ಲಿಲ್ಲಿಲ್ಲ ಪ್ರೀತಿ ಇಲ್ಲದ ಅಣುಕಣವಿಲ್ಲ
ಪ್ರೀತಿ ಪಾಠವಲ್ಲ ಪ್ರಣಯದೂಟವಲ್ಲ.......

love is soul but not one
love is one but not alone
love is God but not a stone

ಹತ್ತಿರದಲ್ಲಿ ನಿಂತರೆ ಅಲ್ಲಿ ಬಳ್ಳಿಗೆ ಸಹವಾಸ
ರೆಪ್ಪೆಯೆ ತೆರೆದ ಕಣ್ಣುಗಳೆಂದೂ ಮಾಡವು ಉಪವಾಸ
ಬಯಸುವುದನ್ನೇ ತಪ್ಪು ಎಂದರೆ ಮನಸಿಗೆ ಅವಮಾನ
ಕ್ಷಣಿಕ ಸುಖಕ್ಕೆ ಸೋಲದಿದ್ದರೆ ಮೋಹಕೂ ಅಪಮಾನ :-)))
ಸ್ನೇಹಕ್ಕೆ ಎಂದು ಪ್ರೀತಿಯೇ ಗೆಳೆಯ
ಪ್ರೀತಿಗೆ ಎಂದು ಸತ್ಯವೇ ಹೃದಯ

ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ......

I am love, love is life
I am love, love is feel
I am love, love is beauty

ನಾನು ಮೋಹವಲ್ಲ ವ್ಯಾಮೋಹವಲ್ಲ
ಸುಖದ ಬಲೆಯಲಿ ಅಲೆಯುವ ಅಶ್ವವಲ್ಲ ಮಾಯಾ ಜಿಂಕೆಯಲ್ಲ
ಆಸೆಯೆಂದು ಪ್ರೀತಿಯಲ್ಲ

love is soul but not one

love is one but not alone
love is God but not a stone
logoblog

Thanks for reading ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ

Previous
« Prev Post

No comments:

Post a Comment

Note: Only a member of this blog may post a comment.