Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, January 20, 2012

ಈ ಸಂಜೆ ಯಾಕಾಗಿದೆ ನೀನಿಲ್ಲದೆ

  Sandeep T Gowda       Friday, January 20, 2012
ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ.....ಓ....
ಈ ಮೌನ ಬಿಸಿಯಾಗಿದೆ.....

ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ ಮೈಯೆಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ....ಓ....ಈ ಜೀವ ಕಸಿಯಾಗಿದೆ.....

ನೀನಿಲ್ಲದೆ ಆ ಚಂದಿರಾ ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸು ನೀಗಿದೆ
ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ.....ಈ ಗಾಯ ಹಸಿಯಾಗಿದೆ..
logoblog

Thanks for reading ಈ ಸಂಜೆ ಯಾಕಾಗಿದೆ ನೀನಿಲ್ಲದೆ

Previous
« Prev Post

No comments:

Post a Comment

Note: Only a member of this blog may post a comment.