Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, January 17, 2012

ಹುಚ್ಚ ಕಿಚ್ಚ (2010) - ನುಡಿಸಲೇ ಹೊಸ ಮಾತಿನ ಪದನಿಸ

  Sandeep T Gowda       Tuesday, January 17, 2012
ಚಿತ್ರಗೀತೆ | ಯೋಗರಾಜ್ ಭಟ್ | ಹುಚ್ಚ ಕಿಚ್ಚ | ೨೦೧೦
ಸಾಹಿತ್ಯ :ಯೋಗರಾಜ್ ಭಟ್
ಹಾಡಿದವರು :ಸೋನುನಿಗಂ,ಅನುರಾಧ ಶ್ರೀರಾಂ

ನುಡಿಸಲೇ ಹೊಸ ಮಾತಿನ ಪದನಿಸ...
ಗಮನಿಸು...ನಸುನಾಚಿಕೆ ನವರಸ,..
ಅತಿಯಾದ ಒಲವಲಿ..ಮಿತಿಯ ಮೀರಿ ಬಿಡಲೇ
ತುಸು ಇತಿ ಮಿತಿ ಜೊತೆ. ಇದೆ ತರ ನನ್ನ ಸತಾಯಿಸು ....
ಗಮನಿಸು.... ನಸು ನಾಚಿಕೆ ನವರಸ
ಅಹಾ.. ನುಡಿಸಲೇ ಹೊಸ ಮಾತಿನ ಪದನಿಸ .\

ವಿರಸ ಸರಸ ಎರಡು ಇದೆ .. ನನ್ನಲ್ಲಿ ...
ನಗೆಯಾ ನಡುವೆ ಹನಿಯೊಂದಿದೆ ಕಣ್ಣಲ್ಲಿ ....
ಅಳು ಬರಿಸುವ ಸಂಜೆಯಲಿ.... ಗಮಿಸು ನಿನ್ನ ತೋಳಿನಲಿ
ಒಂದು ಮುತ್ತು ನೀಡದೇನೆ.. ಚೂರು ಪ್ರೀತಿಸು........ ಇದೆ ರೀತಿ..
ನುಡಿಸಲೇ ಹೊಸ ಮಾತಿನ ಪದನಿಸ.....
ಗಮನಿಸು.... ನಸು ನಾಚಿಕೆ ನವರಸ... \

ವಿರಹ ಎನುವ ಪದವೇ ನನಗಿನ್ನಿಲ್ಲ...
ಸನಿಹ ಇರುವ ಕೆಲಸ ನನಗಿನ್ನೆಲ್ಲ ...
ಇದುವರೆಗಿನ ಏಕಾಂತ .. ಇಳಿಸಿರುವೆನು ಎದೆಯಿಂದ
ತೂಕ ಹಾಕಿ ನೋಡು ನೀನೆ ನನ್ನ ಪ್ರೀತಿ ತುಂಬಾ ಜಾಸ್ತಿ ...
ನುಡಿಸಲೇ ಹೊಸ ಮಾತಿನ ಪದನಿಸ .......
ಗಮನಿಸು...ನಸು ನಾಚಿಕೆ ನವರಸ
ಅತಿಯಾದ ಒಲವಲಿ ಮಿತಿಯಮೀರಿ ಬಿಡಲೇ
ತುಸು ಇತಿ ಮಿತಿ ಜೊತೆ ಇದೆ ತರ ನನ್ನ ಸತಾಯಿಸು
ಗಮನಿಸು ......ನಸು ನಾಚಿಕೆ ನವರಸ..
ಹೇ ನುಡಿಸಲೇ ಹೊಸ ಮಾತಿನ ಪದನಿಸ....\
logoblog

Thanks for reading ಹುಚ್ಚ ಕಿಚ್ಚ (2010) - ನುಡಿಸಲೇ ಹೊಸ ಮಾತಿನ ಪದನಿಸ

Previous
« Prev Post

No comments:

Post a Comment

Note: Only a member of this blog may post a comment.