Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, January 17, 2012

ಪಂಚರಂಗಿ (2010) - ಹುಡುಗರು ಬೇಕು ಕುರಿಯ ಮರಿ ತರ ಹುಡುಗರು ಬೇಕು

  Sandeep T Gowda       Tuesday, January 17, 2012
ಚಿತ್ರಗೀತೆ | ಪಂಚರಂಗಿ | ಯೋಗರಾಜ್ ಭಟ್ | ೨೦೧೦
ಗಾಯನ : ಶ್ರೇಯಾ ಘೋಷಲ್ , ಚೇತನ್ ಸೋಸ್ಕ

ಹುಡುಗರು ಬೇಕು ಕುರಿಯ ಮರಿ ತರ ಹುಡುಗರು ಬೇಕು
ನಾವು ರೆಡಿ ನಾವು ರೆಡಿ
ಹುಡುಗರು ಬೇಕು
ಹುಡುಗರು ಬೇಕು ಪ್ರಾಣ ತೆಗೆದರು ಪ್ರೀತಿಸ ಬೇಕು
ಜೀನ್ಸು ಸ್ವಲ್ಪ ಹರಿದಿರ ಬೇಕು ಒಂದು ಚಪ್ಪಲಿ ಕಳೆದಿರ ಬೇಕು
ನಾವು ಸ್ವಲ್ಪ ಹಂಗೆ ಕಣ್ರಿ
ಸ್ವಲ್ಪ ತಲೆಯು ಕೆಟ್ಟಿರ ಬೇಕು
ಎಲ್ಲಿ ಸ್ವಲ್ಪ ದಾರಿ ಬಿಡಿ.. ನಾವು ರೆಡಿ ನಾವು ರೆಡಿ

ಹುಡುಗರು ಬೇಕು ಕುರಿಯ ಮರಿ ತರ ಹುಡುಗರು ಬೇಕು
ಮುಂದೆ ಹೇಳಿ ನಾವು ರೆಡಿ
ಹುಡುಗರು ಬೇಕು ಬಲಿಯ ಪಶು ತರ ಜೋತೆಗಿರ ಬೇಕು
ಅಡುಗೆ ಪಡುಗೆ ತಿಳಿದಿರ ಬೇಕು ಕಿಸೆಯಲಿ ತುಂಬ ಕಾಸಿರಬೇಕು
ಇದು ಸ್ವಲ್ಪ ಕಷ್ಟ ಕಣ್ರಿ
ಒಳ್ಳೆ ಲೋಫರ್ ಆಗಿರಬೇಕು
ಇಷ್ಟು ಅಂದ ಮೇಲೆ ಬಿಡ್ರಿ..ನಾವು ರೆಡಿ ನಾವು ರೆಡಿ

ನಾವು ಹುಡುಗಿಯರು ಕಣ್ಣಿನಲೆ ಎಲ್ಲ ಹೇಳುವೆವು
ಸ್ಮಾರ್ಟು ಗೂಬೆಗಳೆ ಕೇಳಿರಿ
ನಿಮ್ ಕಣ್ಣು ಚಂದ ಕಣ್ರಿ
ತುಂಬ ಹುಡುಕುವೆವು ಹುಡುಗರಲಿ ಒಳ್ಳೆ ತಳಿಯನ್ನು
ಸಾಲಿನಲಿ ಬಂದು ಸಾಯಿರಿ
ನಮ್ ಕೆಲ್ಸ ಅದೆ ಕಣ್ರಿ

ಹುಡುಗರು ಬೇಕು ಎಷ್ಟು ಉಗಿದರು ನಗುತಿರ ಬೇಕು
ಅಷ್ಟೆ ತಾನೆ ನಾವು ರೆಡಿ
ಹುಡುಗರು ಬೇಕು ನನ್ನ ಗೆಳತಿಯ ದ್ವೇಶಿಸಬೇಕು
ತುಂಬ ಡಿಸೆಂಟ್ ಅಗಿರಬೇಕು ಸ್ವಲ್ಪ ಪೋಲಿ ಗುಣವಿರಬೇಕು
ನಾವು ತುಂಬ ಸಾಚ ಕಣ್ರಿ
ಚೂರು ಹಾಡಲು ಕಲಿತಿರಬೇಕು
ಸ ರಿ ಗ ಮ ಪ ದ ನಿ ಸ... ನಾವು ರೆಡಿ ನಾವು ರೆಡಿ
ನಾವು ರೆಡಿ ಎವರ್ ರೆಡಿ

ಡಾರ್ಕು ಹ್ಯಾಂಡ್ಸಮ್ಮು ತಲೇಲಿ ತುಂಬಿದೆ ಮಣ್ಣು
ನೋಡು ಮೂತಿಯನು ಹೆಂಗಿದೆ
ಪರವಾಗಿಲ್ಲ ಇನ್ನು ಬಯ್ರಿ
ಟಾಪ್ ಟು ಬಾಟಮ್ಮು ಕೋತಿಯ ವಂಶವೆ ಸೇಮು
ತುಂಬ ಪ್ರಾಬ್ಲಮ್ಮು ಆಗಿದೆ
ನಮ್ ಕಡೆ ಸ್ವಲ್ಪ ನೋಡ್ರಿ

ಹುಡುಗರು ಬೇಕು ತಾಯಿ ಮಾತಿಗೆ ನೋ ಅನ್ನಬೇಕು
ನಮ್ಮ ಅಮ್ಮ ಸೂಪರ್ ಕಣ್ರಿ
ಹುಡುಗರು ಬೇಕು
ಹುಡುಗರು ಬೇಕು ನಮ್ಮ ಆಜ್ಞೆಗೆ ಕುಣಿಯಲೆ ಬೇಕು
ತಯ್ಯ ತಕ್ಕ ನಾವು ರೆಡಿ
ಹುಡುಗರು ಬೇಕು ಜಗಳ ಆಡುತ ಮುದ್ದಿಸಬೇಕು
ನನ್ನ ಕಣ್ಣಲಿ ಕುಳಿತಿರಬೇಕು
ನನ್ನ ಹೆಸರನೆ ಪಿಸುಗುಡಬೇಕು
ಅದು ತುಂಬ ಇಜಿ ಬಿಡ್ರಿ
ಮದುವೆ ಆದರು ಪ್ರೀತಿಸಬೇಕು
ಇದು ಸ್ವಲ್ಪ ಅತಿ ಕಣ್ರಿ.. ಆದ್ರು ಕೂಡ ನಾವು ರೆಡಿ

ಹುಡುಗರು ಬೇಕು ಕನಸು ಎಣೆಯುವ ಚಟವಿರಬೇಕು
ಸಂಜೆ ಹೋತ್ತು ಸಿಕ್ಕು ನೋಡ್ರಿ
ಹುಡುಗರು ಬೇಕು ನನ್ನ ಹೋಗಳುವ ಗುಣವಿರಬೇಕು
ಪ್ರೇಮ ಪಂಡಿತನಾಗಿರಬೇಕು ಸಣ್ಣ ಮಗುವಿನ ಮನಸಿರಬೇಕು
ನಾವು ಇನೋಸೆಂಟ್ಟು ಕಣ್ರಿ
ರಸಿಕ ಶಿಕಾಮಣಿಯಾಗಿರಬೇಕು
ಎಲ್ಲ ತರ ನಾವು ರೆಡಿ.. ನೀವು ರೆಡಿಯಾಗಿ ಬಿಡಿ
logoblog

Thanks for reading ಪಂಚರಂಗಿ (2010) - ಹುಡುಗರು ಬೇಕು ಕುರಿಯ ಮರಿ ತರ ಹುಡುಗರು ಬೇಕು

Previous
« Prev Post

No comments:

Post a Comment

Note: Only a member of this blog may post a comment.