ಚಿತ್ರಗೀತೆ | ಜಾಕಿ | ಯೋಗರಾಜ್ ಭಟ್ | ೨೦೧೦
ಶಿವ ಅಂತ ಹೋಗುತಿದ್ದೆ ರೋಡಿನಲ್ಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲ್ಲಿ
ಅರ್ಧ ಟ್ಯಾಂಕು ಪೆಟ್ರೋಲ್ ಇತ್ತು ಬೈಕ್ ನಲ್ಲಿ
ನೀ ಕಂಡೆ ಸೈಡಿನಲ್ಲಿ..
ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲ್ಲಿ
ಕಂಬ್ಳಿ ಹುಳ ಬಿಟ್ಟಂಗಾಯ್ತು ಹಾರ್ಟಿನಲ್ಲಿ
ಕಚಗುಳಿ ಇಟ್ಟಂಗಾಯ್ತು ಬೆನ್ನಿನಲ್ಲಿ
ನೀ ಕುಂತಾಗ ಬೈಕಿನಲ್ಲಿ
ಟಾಪ್ ಗೇರು ಹಾಕಂಗಿಲ್ಲ ಸುಮ್ನೆ ಬ್ರೇಕು ಹೊಡೆಯೊಂಗಿಲ್ಲ
ಟಾಪ್ ಗೇರು ಹಾಕಂಗಿಲ್ಲ ಸುಮ್ನೆ ಬ್ರೆಕು ಹೊಡೆಯೊಂಗಿಲ್ಲ
ಅಯ್ಯೋ ಪಾಪ ಹುಡುಗಿ ಜೀವ ಹೆದರುವುದು
ಥೂ ನಂಗೆ ಯಾಕೆ ಹಿಂಗೆಯಲ್ಲ ಅನಿಸುವುದು
ಒಂದು ಮಾತು ಕೇಳಲಿಲ್ಲ ಒಂದು ಮಾತು ಕೇಳಲಿಲ್ಲ ಹಿಂದೆ ಮುಂದೆ ನೋಡಲಿಲ್ಲ
ನನ್ನ ಎದೆ ಸೈಟನ್ನು ಕೊಂಡುಕೊಂಡು ತಡ ಮಾಡದೆ ಪಾಯವ ಹೂಡಿಬಿಟ್ಲು
ಹೂವಿನಂತ ಹುಡುಗ ನಾನು ತುಂಬಾ ಮೃಧು
ಹೂವಿನಂತ ಹುಡುಗ ನಾನು ತುಂಬಾ ಮೃಧು
ಹೆಣ್ಮಕ್ಕಳೆ ಸ್ಟ್ರಾಂಗ್ ಗುರು...
ರಾಂಗ್ ಗುರು... ರಾಂಗ್ ಗುರು... ರಾಂಗ್ ಗುರು
ಶಿವ ಅಂತ ಹೋಗುತಿದ್ದೆ ರೋಡಿನಲ್ಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲ್ಲಿ
ಅರ್ಧ ಟ್ಯಾಂಕು ಪೆಟ್ರೋಲ್ ಇತ್ತು ಬೈಕ್ ನಲ್ಲಿ
ನೀ ಕಂಡೆ ಸೈಡಿನಲ್ಲಿ
ಉಣ್ಣಲಿಲ್ಲ ತಿನ್ನಲಿಲ್ಲ ಮಟ ಮಟ ಮದ್ಯಾನವೇ
ಉಣ್ಣಲಿಲ್ಲ ತಿನ್ನಲಿಲ್ಲ ಮಟ ಮಟ ಮದ್ಯಾನವೇ
ಕುಂತು ಬಿಟ್ಲು ಹಿಂದುಗಡೆ ಸೀಟಿನಲ್ಲಿ..
ನಾವ್ ಹೊಡ್ಕೊಬೇಕು ನಮ್ಮದೇ ಬೂಟಿನಲ್ಲಿ..
ಒಂದು ಕೆಜಿ ಅಕ್ಕಿ ರೇಟು.. ಒಂದು ಕೆಜಿ ಅಕ್ಕಿ ರೇಟು ಮೂವತ್ತುರುಪಾಯಿ ಅಗೆಹೊಯ್ತು
ಎಜಿಯಾಗಿ ಹೇಗೆ ನಾನು ಪ್ರೀತಿಸಲ್ಲಿ ಅದರಲ್ಲೂ ಮೊದಲನೇ ಬೇಟಿಯಲ್ಲಿ
ರೇಶನ್ ಕಾರ್ಡು ಬೇಕೇ ಬೇಕು ಪ್ರೀತಿಸಲು., ರೇಶನ್ ಕಾರ್ಡು ಬೇಕೇ ಬೇಕು ಪ್ರೀತಿಸಲು..
ಸಂಸಾರ ಬೇಕ ಗುರು.., ಬೇಕು ಗುರು... ಬೇಕು ಗುರು.. ಬೇಕು ಗುರು..ಬೇಕು ಗುರು..
ಶಿವ ಅಂತ ಹೋಗುತಿದ್ದೆ ರೋಡಿನಲ್ಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲ್ಲಿ
ಅರ್ಧ ಟ್ಯಾಂಕು ಪೆಟ್ರೋಲ್ ಇತ್ತು ಬೈಕ್ ನಲ್ಲಿ
ನೀ ಕಂಡೆ ಸೈಡಿನಲ್ಲಿ
ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲ್ಲಿ
ಕಂಬ್ಳಿ ಹುಳ ಬಿಟ್ಟಂಗಾಯ್ತು ಹಾರ್ಟಿನಲ್ಲಿ
ಕಚಗುಳಿ ಇಟ್ಟಂಗಾಯ್ತು ಬೆನ್ನಿನಲ್ಲಿ
ನೀ ಕುಂತಾಗ ಬೈಕಿನಲ್ಲಿ
No comments:
Post a Comment
Note: Only a member of this blog may post a comment.