Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, January 25, 2012

ಗುರುವಾರ ಬಂತಮ್ಮ (1981) - ಗುರುವಾರ ಬಂತಮ್ಮ

  Sandeep T Gowda       Wednesday, January 25, 2012
ಗುರುವಾರ ಬಂತಮ್ಮ (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧


ಸಂಗ್ರಹ: ಗುರುವಾರ ಬಂತಮ್ಮ
ರಚನೆ: ಚಿ.ಉದಯಶಂಕರ್
ಸಂಗೀತ: ಎಂ.ರಂಗರಾವ್
ಗಾಯನ: ಡಾ.ರಾಜ್‍ಕುಮಾರ್
------------------------------------------------------------
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರುತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆSS..
ನಮತಾಮ್ ಕಾಮಧೇನವೆ
------------------------------------------------------------

ಗುರುವಾರ ಬಂತಮ್ಮ...ಗುರುರಾಯರ ನೆನೆಯಮ್ಮ
ಗುರುವಾರ ಬಂತಮ್ಮ...ಗುರುರಾಯರ ನೆನೆಯಮ್ಮ
ಸ್ಮರಣೆಮಾತ್ರದಲಿ ಕ್ಲೇಶಕಳೆದು..ಸದ್ಗತಿಯ ಕೊಡುವನಮ್ಮ

ವಾರ ಬಂತಮ್ಮ..ಗುರುವಾರ ಬಂತಮ್ಮ

---------------------೧---------------------

ಯೋಗಿ ಬರುವನಮ್ಮ ಶುಭ ಯೋಗ ಬರುವುದಮ್ಮ
ಯೋಗಿ ಬರುವನಮ್ಮ ಶುಭ ಯೋಗ ಬರುವುದಮ್ಮ
ರಾಘವೇಂದ್ರ ಗುರುರಾಯ ಬಂದು..ಭವರೋಗ ಕಳೆವನಮ್ಮ

ವಾರ ಬಂತಮ್ಮ..ಗುರುವಾರ ಬಂತಮ್ಮ

---------------------೨---------------------

ಮನವ ತೊಳೆಯಿರಮ್ಮ..ಭಕ್ತಿಯ ಮಣೆಯ ಹಾಕಿರಮ್ಮ
ಮನವ ತೊಳೆಯಿರಮ್ಮ..ಭಕ್ತಿಯ ಮಣೆಯ ಹಾಕಿರಮ್ಮ
ಧ್ಯಾನದಿಂದ ಕರೆದಾಗ ಬಂದು..ಒಳೆಗಣ್ಣ ಬೆರೆವನಮ್ಮ

ವಾರ ಬಂತಮ್ಮ..ಗುರುವಾರ ಬಂತಮ್ಮ

---------------------೩---------------------

ಕೋಪ ಅರಿಯನಮ್ಮ...ಯಾರನು ದೂರ ತಳ್ಳನಮ್ಮ
ಕೋಪ ಅರಿಯನಮ್ಮ...ಯಾರನು ದೂರ ತಳ್ಳನಮ್ಮ
ಪ್ರೀತಿ ಮಾತಿಗೆ ಸೋತು ಬರುವ..ಮಗುವಂತೆ ಕಾಣಿರಮ್ಮ

ವಾರ ಬಂತಮ್ಮ..ಗುರುವಾರ ಬಂತಮ್ಮ

---------------------೪---------------------

ಹಿಂದೆ ಬರುವನಮ್ಮ..ರಾಯರ ನೆರಳಿನಂತೆ ಹನುಮ
ಹಿಂದೆ ಬರುವನಮ್ಮ..ರಾಯರ ನೆರಳಿನಂತೆ ಹನುಮ
ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ

ವಾರ ಬಂತಮ್ಮ..ಗುರುವಾರ ಬಂತಮ್ಮ
ರಾಯರ ನೆನೆಯಮ್ಮ....ಗುರುರಾಯರ ನೆನೆಯಮ್ಮ
ಸ್ಮರಣೆಮಾತ್ರದಲಿ ಕ್ಲೇಶಕಳೆದು..ಸದ್ಗತಿಯ ಕೊಡುವನಮ್ಮ

ವಾರ ಬಂತಮ್ಮ..ಗುರುವಾರ ಬಂತಮ್ಮ
ರಾಯರ ನೆನೆಯಮ್ಮ....ಗುರುರಾಯರ ನೆನೆಯಮ್ಮ
ವಾರ ಬಂತಮ್ಮ..ಗುರುವಾರ ಬಂತಮ್ಮ
ರಾಯರ ನೆನೆಯಮ್ಮ....ಗುರುರಾಯರ ನೆನೆಯಮ್ಮ

- ಈ ನನ್ನ ಅರ್ಪಣೆ ರಾಯರಿಗೆ
logoblog

Thanks for reading ಗುರುವಾರ ಬಂತಮ್ಮ (1981) - ಗುರುವಾರ ಬಂತಮ್ಮ

Previous
« Prev Post

No comments:

Post a Comment

Note: Only a member of this blog may post a comment.