Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, September 13, 2019

ಬಡವನಾದರೆ ಏನು ಪ್ರಿಯೆ / badavanadare enu priye

  Sandeep T Gowda       Friday, September 13, 2019

ಬಡವನಾದರೆ ಏನು ಪ್ರಿಯೆ ಕೈ ತುತ್ತು ತಿನಿಸುವೆ
ಎದೆಯ ತುಂಬ ಒತ್ತಿಕೊಂಡು ಮುತ್ತು ಮಳೆಯ ಸುರಿಸುವೆ

ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿಯಾಗುವೆ
ಪುಟ್ಟ ಗುಡಿಸಲಲ್ಲಿ ನಿನ್ನ ಪಟ್ಟದರಸಿ ಮಾಡುವೆ

ಉಳ್ಳವರ ಎದೆಗೆ ಒದ್ದು ಮೈ ಮಾನ ಮುಚ್ಚುವೆ
ರೆಟ್ಟೆ ಮೇಲೆ ಹೊತ್ತು ನಿನ್ನ ಜಗವ ಸುತ್ತಿ ತಣಿಸುವೆ

ಬೆವರು ಹರಿಸಿ ಹೂವ ಬೆಳೆಸಿ ಮುಡಿಯಲಿಟ್ಟು ನಗಿಸುವೆ
ಭುಜಕೆ ಭುಜವ ಹಚ್ಚಿ ನಿಂತು ತೋಳುಬಂಧಿ ತೊಡಿಸುವೆ

ಹರಿವ ನದಿಗೆ ಅಡ್ಡ ನಿಂತು ನಿನಗೆ ದಾರಿ ಮಾಡುವೆ
ಬಿಸಿಲು ಮಳೆಯ ಚಳಿಯ ನುಂಗಿ ನೆರಳು ಬೆಳಕು ಆಗುವೆ
logoblog

Thanks for reading ಬಡವನಾದರೆ ಏನು ಪ್ರಿಯೆ / badavanadare enu priye

Previous
« Prev Post

No comments:

Post a Comment

Note: Only a member of this blog may post a comment.