Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Thursday, July 25, 2019

ಸಾವಿರಕೆ ಒಬ್ಬ ಕಲಾವಿದ - ಕಲಾವಿದ

  Sandeep T Gowda       Thursday, July 25, 2019

ಸಾವಿರಕೆ ಒಬ್ಬ ಕಲಾವಿದ
ಸಾಹಿತ್ಯ: ಹಂಸಲೇಖ
ಗಾಯಕರು: ಎಸ್.ಜಾನಕಿ


ಸಾವಿರಕೆ ಒಬ್ಬ ಕಲಾವಿದ
ಸಾವಿರಕೆ ಒಬ್ಬ ಕಲಾವಿದ
ಹುಮ್ಮನದ ಚಿತ್ರ ಕಲಾವಿದ
ಚೈತ್ರ ಮಾಸವ ಚಿತ್ರ ಮಾಡಿದ
ಅಭಿಮಾನವ ಹೋಳೆ ಮಾಡಿದ
ಸಾವಿರಕೆ ಒಬ್ಬ ಕಲಾವಿದ
ಹುಮ್ಮನದ ಚಿತ್ರ ಕಲಾವಿದ

ಕೈಯಲಿ ಪುಟ್ಟ ಕುಂಚ, ಕಣ್ಣಲೋ ಈ ಪ್ರಪಂಚ
ಆ ಮನಸೆಲ್ಲೋ,  ಆ ತಪಸೆಲ್ಲೋ,
ಬಿಳೀ ಹಾಳೆಯಲಿ  ರಸ ವೇಳೆಯಲಿ ಈ ಚಿತ್ತಾರ...
ಆ ರವಿಗೆ ಬೆಳಕು ನೆರಳಿನ ಆಟ
ಈ ಕುಂಚಕೆ ಏಳು ಬಣ್ಣಗಳ ಕೂಟ

ಸಾವಿರಕೆ ಒಬ್ಬ ಕಲಾವಿದ
ಹುಮ್ಮನದ ಚಿತ್ರ ಕಲಾವಿದ
ಒಳಗಣ್ಣು ತೆರೆದು ನೋಡು,
ಸೌಂದರ್ಯ ಸೂರೇ ಮಾಡು
ಈ ಜಗವೆಲ್ಲಾ ಬರಿ ಕಲೆಯಂತೆ,
ಈ ಕಲೆಯಲ್ಲಿ , ಈ ಬಲೆಯಲ್ಲಿ ನೀ ಸೆರೆಯಾಗು
ಈ ದೇಹಕೆ ತಪ್ಪದು ಎಂದಿಗೂ ಸಾವು ನೋವು
ಈ ಜೀವಕೆ ತಪ್ಪದೆ ತಿನಿಸು ಕಲೆಯ  ಮೇವು

ಸಾವಿರಕೆ ಒಬ್ಬ ಕಲಾವಿದ
ಹುಮ್ಮನದ ಚಿತ್ರ ಕಲಾವಿದ
ಚೈತ್ರ ಮಾಸವ ಚಿತ್ರ ಮಾಡಿದ
ಅಭಿಮಾನವ ಹೋಳೆ  ಮಾಡಿದ
logoblog

Thanks for reading ಸಾವಿರಕೆ ಒಬ್ಬ ಕಲಾವಿದ - ಕಲಾವಿದ

Previous
« Prev Post

No comments:

Post a Comment

Note: Only a member of this blog may post a comment.