ಶೃಂಗಾರ ಕಾವ್ಯ (1993)
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹಾಡಿದವರು: ಎಲ್.ಏನ್.ಶಾಸ್ತ್ರಿ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಉಸಿರಾ ಹಿಡಿದಾ ತಂತಿ ಕಡಿದ ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಕಲೆಗಾರ ಕಡೆದು ಕರುಬಿದ ಕಥೆಗಾರ ಕಥೆಯ ಕೆಡಿಸಿದ
ಹೊಣೆಗಾರ ಹರಸಿ ಹಲುಬಿದ ಬೆಳೆಗಾರ ಬರವ ಬರಿಸಿದ
ಕನಸು ಸುರಿದಾ ಕಣ್ಣೇ ತೆಗೆದ ಇನ್ನು ಶೂನ್ಯ ಗಾನವೇ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಉಸಿರಾ ಹಿಡಿದಾ ತಂತಿ ಕಡಿದ ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಲಲಲಲಲಾ ಲಲಲಾಲಾ ಲಲ್ಲಲ್ಲಲ್ಲಲಾ
ವರವಾಗಿ ಒಲವ ತಂದನು ಮರವಾಗೊ ಗಿಡವ ಕಡಿದನು
ಶುಭವಾಗಲೆಂದು ನುಡಿದನು ಸುಖಕಾಣುವಾಗ ಮುನಿದನು
ಜಯವ ತಡೆದ ಭಯವ ಸುರಿದ ಇನ್ನು ಶೋಕ ಗಾನವೇ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಉಸಿರಾ ಹಿಡಿದಾ ತಂತಿ ಕಡಿದ ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
No comments:
Post a Comment
Note: Only a member of this blog may post a comment.