Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Thursday, July 25, 2019

ಸೋಬಾನೆ ಎನ್ನಿರಮ್ಮಾ - ಚಿಕ್ಕೆಜಮಾನ್ರು

  Sandeep T Gowda       Thursday, July 25, 2019
ಸೋಬಾನೆ ಎನ್ನಿರಮ್ಮಾ
ಸಾಹಿತ್ಯ : ಹಂಸಲೇಖ
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ


ಸೋಬಾನೆ ಎನ್ನಿರಮ್ಮಾ ಸೋಬಾನೆ
ಸೊ ಎನ್ನಿರೋ ಸೋಬಾನೆ ಎನ್ನಿರೋ..
ಸೋಬಾನೆ ಎನ್ನಿರಮ್ಮಾ ಸೋಬಾನೆ
ಸೊ ಎನ್ನಿರೋ ಸೋಬಾನೆ ಎನ್ನಿರೋ..
ಮಲ್ಲಿಗೆ ಮನಸವಳೇ  ಸೋಬಾನೆ...
ಗಂಧದ ಗುಣದವನೇ ಸೋಬಾನೆ..

ಸತಿ ಪತಿ ಮೊದಲ ಸತಿ ಕೂಡೋ...
ರಾತ್ರಿಗೆ.. ರಾತ್ರಿಗೆ.. ನಾಚಿಕೆ ಏತಕೆ ಬಾ...
ಸತಿ ಪತಿ ಮೊದಲ ಸತಿ ಹಾಡೋ...
ಹಾಡಿಗೆ.. ಹಾಡಿಗೆ.. ಆತುರ ಏತಕೆ ಬಾ...

ಹಾಲುಂಡರೂ ಖೀರುಂಡರೂ ಬಾಯಾರಿದೆ ಬಾರೆ..
ಹಣ್ಣು ಉಂಡರು ಹಲಸುಉಂಡರು ಹಸಿವಾಗಿದೆ ಬಾರೇ
ಹೂಂ.. ಎಂದರೂ ಉಹೂಂ ಎಂದರೂ ನಾನೆಂದಿಗೂ ನಿಮಗೆ
ಫಲಾಹಾರವೂ ಮೊದಲಾಗಲಿ ಸುಖ ಭೋಜನ ಕಡೆಗೆ
ಕಾಯುವ ಕಾಯಕ ಬೇಸರ.. ಕಾವಲಿ ಕಾದರೆ ಚುರಚುರಾ
ಜಿಂಕೆಯ ಕಣ್ಣವಳೇ ಸೋಬಾನೆ
ದಂತದ ಮೈಯವನೇ ಸೋಬಾನೆ

ಸತಿ ಪತಿ ಮೊದಲ ಸತಿ ಕೂಡೋ...
ರಾತ್ರಿಗೆ... ರಾತ್ರಿಗೆ... ನಾಚಿಕೆ ಏತಕೆ ಬಾ...
ಸತಿ ಪತಿ ಮೊದಲ ಸತಿ ಹಾಡೋ...
ಹಾಡಿಗೆ.. ಹಾಡಿಗೆ.. ಆತುರ ಏತಕೆ ಬಾ...

ತುದಿಗಾಲಲ್ಲಿ ಹಠ ಮಾಡುತ ಕುಣಿದಾಡಿದೆ ಬಯಕೆ
ನವಿರೇಳಿಸಿ ನಶೆಯೇರಿತು ಬಿಗಿಯಾಗಿದೆ ರವಿಕೆ
ಆನಂದಕೆ ಮೊದಲ್ಯಾವುದು ಕೊನೆಯಾಗುವುದು ಈಗ
ಹೊಸದಾದರೂ ಒಗಟಲ್ಲವೋ ಸೋಬಾನ ರಾಗ
ಕಾಯುವ ಕಾಯಕ ಬೇಸರ.. ಕಾವಲಿ ಕಾದರೆ ಚುರಚುರಾ
ಬಾಣದ ನೋಟದವನೇ ಸೋಬಾನೆ
ರಂಭೆಯ ಮಾಟದವಳೆ  ಸೋಬಾನೆ

ಸತಿ ಪತಿ ಮೊದಲ ಸತಿ ಹಾಡೋ
ಹಾಡಿಗೆ ಹಾಡಿಗೆ ಆತುರ ಏತಕೆ ಬಾ
ಸತಿ ಪತಿ ಮೊದಲ ಸತಿ ಕೂಡೋ...
ರಾತ್ರಿಗೆ... ರಾತ್ರಿಗೆ... ನಾಚಿಕೆ ಏತಕೆ ಬಾ... 
logoblog

Thanks for reading ಸೋಬಾನೆ ಎನ್ನಿರಮ್ಮಾ - ಚಿಕ್ಕೆಜಮಾನ್ರು

Previous
« Prev Post

No comments:

Post a Comment

Note: Only a member of this blog may post a comment.