ಸ್ವಾತಿ ಮುತ್ತು (2003) ಮಲಗಿರುವ ಭೂಮಿಗೆ
ಸಂಗೀತ : ರಾಜೇಶ ರಮಾನಾಥ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಡಾ.ಕೆ.ಜೆ.ಏಸುದಾಸ್
ಲಾಲಿ ಲಾಲಿ ಲಾಲಿಲಾಲಿ ಲಾಲಿ ಲಾಲಿ ಲಾಲಿಲಾಲಿ
ಮಲಗಿರುವ ಭೂಮಿಗೆ ಚಂದಿರನ ಲಾಲಿ ಮಗುವಂತ ಮನಸಿಗೆ ಮುದ್ದಾದ ಲಾಲಿ
ಉಸಿರಾದ ಹೆಣ್ಣಿಗೆ ಉಸಿರೆಂದ ಲಾಲಿ ಈ ಪ್ರೇಮ ಮುಕ್ತಿಗೆ ಕಣ್ಣೀರೇ ಲಾಲಿ
ಮಲಗಿರುವ ಭೂಮಿಗೆ ಚಂದಿರನ ಲಾಲಿ ಮಗುವಂತ ಮನಸಿಗೆ ಮುದ್ದಾದ ಲಾಲಿ
ಲಾಲಿ ಲಾಲಿ ಲಾಲಿಲಾಲಿ
ಕೈ ಹಿಡಿದು ನಡೆಸಿದೊಳು ಕೈವಲ್ಯಾ ಲಾಲಿ ಮಮತೆಯನ್ನೇ ಉಣಿಸಿದಳು ಮನಸಾರೇ ಲಾಲಿ
ಗುರುವಂತೆ ತಿದ್ದಿದಳು ನನ್ನ ನೆರಳೇ ಲಾಲಿ ಸಹನೆಯಲ್ಲಿ ಧರೆ ಇವಳು ತಂಗಾಳಿ ಲಾಲಿ
ಮಲಗಿರುವ ಭೂಮಿಗೆ ಚಂದಿರನ ಲಾಲಿ ಮಗುವಂತ ಮನಸಿಗೆ ಮುದ್ದಾದ ಲಾಲಿ
ಚೇತನವ ಸೂಸಿದಳು ಜರಗಾನ ಲಾಲಿ ಶ್ರೀಗಂಧ ಆದವಳು ಶಿರಬಾಗಿ ಲಾಲಿ
ಪ್ರೀತಿ ನೀಡಿದಳು ನನ್ನ ಪ್ರಾಣ ಲಾಲಿ ಬದುಕನ್ನೇ ನೀಡಿದಳು ನನ್ನ ಬದುಕೇ ಲಾಲಿ
ಮಲಗಿರುವ ಭೂಮಿಗೆ ಚಂದಿರನ ಲಾಲಿ ಮಗುವಂತ ಮನಸಿಗೆ ಮುದ್ದಾದ ಲಾಲಿ
ಉಸಿರಾದ ಹೆಣ್ಣಿಗೆ ಉಸಿರೆಂದ ಲಾಲಿ ಈ ಪ್ರೇಮ ಮುಕ್ತಿಗೆ ಕಣ್ಣೀರೇ ಲಾಲಿ
ಲಾಲಿ ಲಾಲಿ ಲಾಲಿಲಾಲಿ ಲಾಲಿ ಲಾಲಿ ಲಾಲಿಲಾಲಿ
No comments:
Post a Comment
Note: Only a member of this blog may post a comment.