ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ
ಬಂದ ವಿಘ್ನ ಕಳೆಯೋ ಗಣನಾಥ||
ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲ್ಲಿ ಗಣನಾಥ ||
ಮಾಧವನ ಆಜ್ಞೆಯಿಂದ (ಆದಿಯಲ್ಲಿ ನಿನ್ನ ಪಾದ) ಪೂಜಿಸಿದ ಧರ್ಮರಾಯ
ಸಾಧಿಸಿದ ರಾಜ್ಯ ಗಣನಾಥ ||
ಮಂಗಳ ಮೂರುತಿ ಗುರು ರಂಗ ವಿಠಲನ ಪಾದ
ಭೃಂಗನೆ (ಹಿಂಗದೆ) ಪಾಲಿಸೋ ಗಣನಾಥ ||
No comments:
Post a Comment
Note: Only a member of this blog may post a comment.