Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Saturday, September 2, 2017

ತಿಳಿ ಸಂಜೆಲೀಗ - ಆಪರೇಷನ್ ಅಲಮೇಲಮ್ಮ - Thili Sanjeleega - Operation Alamelamma kannada Movie song lyrics

  Sandeep T Gowda       Saturday, September 2, 2017
ತಿಳಿ ಸಂಜೆಲೀಗ ಹಾರೋ ಗುಬ್ಬಚ್ಚಿ ಒಂಟಿಯಲ್ಲ
ಜೊತೆಯಲ್ಲಿ ಸಿಕ್ಕೈತೆ ಹೊಸ ಗೂಡು
ಮ್ರುದು ಮೌನ ಒಂದು ಬಾಗಿಲನ್ನು ತಟ್ಟಿ ಬಂತಲ್ಲ
ತೆಗಿಬೇಕ ತೆಗಿಬಾರ್ದ ಮಾತಾಡು

ತನ್ನಂತಾನೆ ಹಾಡಿ ಹಾಡಿ ಹಾಡಿ ನಲಿದಿದೆ ನಲುಮೆ
ಬೆಕಂತಾನೆ ಯಾರೊ ಮಾಡಿ ಕೂಡಿ ಇಟ್ಟ ಮಹಿಮೆ
ನಲವತ್ತು ನಾಚಿಕೆ ಒಟ್ಟಿಗೇನೆ ಕೂಡಿ
ಹುಡುಗನ ಕೈಗೆ ಚೆಂದದ ಬೇಡಿ

ಒಲವೊಂದು ಈಗೆ ಬೇರ ದಾರಿಯಲ್ಲಿ ಹುಡುಗಿಯ ಬಳಿ ನಿಂತು
ಇವನೇನೆ ಸ್ವೀಟಿಗೋಸ್ಕರ ಕಾದ ಅಂಗಳದಲಿ ಕುಂತು
ಟೀಚರ್ ಪಾಡಿಗೆ ಹೇಗೊ ಇದ್ರು ಯಾವುದೋ ಹೊಸ ನಂಟು
ಮತ್ತೊಮ್ಮೆ ಕಣ್ಣಿಗೆ ಕಾಣಿಸಿಕೊಂಡ ಶಿಷ್ಯನ ಮೇಲ್ ಸಿಟ್ಟು

ನಗು ಒಂದು ತಾನೆ ಬೀರಿ ಬಂತು ಹುಡುಕುತ ಹ್ರುದಯಾನ
ನಗಬೇಕ ನಗಬಾರ್ದ ನೀವ್ ಹೇಳಿ
ಅರೆ ಪ್ರೀತಿ ಎಂಬ ತೋಟದಲ್ಲಿ ಇವ್ರು ಹೂವಂತೆ
ಅರಳುತ ಬಾಡುತ್ತ ನೀವ್ ನೋಡಿ

ಸದ್ದಿಲ್ಲದೆ ಎಲ್ಲೋ ಎದ್ದು ಹೋಗಿದಂತಿದೆ ಮನಸು
ಮುದ್ದಾಗಿದೆ ಆದ್ರು ಕೂಡ ಮೂತಿ ಮುರಿಯುವ ಮುನಿಸು
ಮತ್ತೊಮ್ಮೆ ತೇಲಿ ಬಂದಂತೆ ಹರಿದ ಹಾಳೆ
ಸೂರ್ಯನು ಹಾಗೆ ಮುಳುಗುವ ವೇಳೆ

ಅರೆರೆರೆ ನೆನ್ನೆ ಎಂಬ ದಾರಿಯಲ್ಲಿ ನೆನಪು ನೂರ ಎಂಟು
ಈ ಪರ್ಮಿಯ ಎದೆಗೆ ಅನನ್ಯಳ ಹೆಸರು ಆಗ್ಲಿ ಪರ್ಮನೆಂಟು
ಟೀಚರ್ ಪ್ಲೀಸು ಒಪ್ಪಿಕೊಳ್ಳಿ ಹುಡುಗ ಕಟ್ಟುನಿಟ್ಟು
ಸಹ ಸಿದ್ದ ಒಲವಲ್ಲಿ ಒಂದು ಮುದ್ದು ಪೆಟ್ಟು

ಒಲವೊಂದು ಈಗೆ ಬೇರ ದಾರಿಯಲ್ಲಿ ಹುಡುಗಿಯ ಬಳಿ ನಿಂತು
ಇವನೇನೆ ಸ್ವೀಟಿಗೋಸ್ಕರ ಕಾದ ಅಂಗಳದಲಿ ಕುಂತು
ಟೀಚರ್ ಪಾಡಿಗೆ ಹೇಗೊ ಇದ್ರು ಯಾವುದೋ ಹೊಸ ನಂಟು
ಮತ್ತೊಮ್ಮೆ ಕಣ್ಣಿಗೆ ಕಾಣಿಸಿಕೊಂಡ ಶಿಷ್ಯನ ಮೇಲ್ ಸಿಟ್ಟು


ತಿಳಿ ಸಂಜೆಲೀಗ - ಆಪರೇಷನ್ ಅಲಮೇಲಮ್ಮ - Thili Sanjeleega - Operation Alamelamma kannada Movie song lyrics
logoblog

Thanks for reading ತಿಳಿ ಸಂಜೆಲೀಗ - ಆಪರೇಷನ್ ಅಲಮೇಲಮ್ಮ - Thili Sanjeleega - Operation Alamelamma kannada Movie song lyrics

Previous
« Prev Post

No comments:

Post a Comment

Note: Only a member of this blog may post a comment.