Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Saturday, September 9, 2017

ರತ್ನನ್ ಯೋಚ್ನೆ - ರತ್ನನ ಪದಗಳು. - Rathnan Padagalu

  Sandeep T Gowda       Saturday, September 9, 2017

ಬಯಸಿದ ಸಾಮನ್ ಬೇಕಾದಂಗೆ
ಇರಲಿ ಇಲ್ದೇನ್ ಇರಲಿ-
ತಾಪತ್ರೇಯನಕ್ ತಪ್ಪಿದ್ದಲ್ಲ!
ಸುಳ್ಳಂತ್ ಅನ್ನೌನ್ ಬರಲಿ!

ಬುಂಡೇಲ್ ಒಂದ್ ತೊಟ್ ಇರೊಗಂಟ್ಲೂನೆ
ನಿದ್ದೆ ಗಿದ್ದೆ ಬರದು!
ಬುಂಡೇ ಕಾಲಿ ಆಗೋದ್ರನಕ
ನಿದ್ದೆ ಬರಲೇ ಬರದು!

ಈ ತಾಪತ್ರೇನ್ ತಳ್ಳಾಕಾಕೆ
ಏನ್ ಮಾಡ್ಬೇಕೊ ಕಾಣೆ!
ಯೋಚಿಸ್ದಸೂ ತಗಲ್ಕೋಂತೈತ್ ಆ
ಯೋಚ್ನೇಗ್ ಒಂದ್ ಒಸ್ ಸಾಣೆ!

ಬಯಸಿದ್ ಸಾಮಾನ್ ಬೇಕಾದಂಗೆ
ಇರಲಿ ಇಲ್ದೇನ್ ಇರಲಿ-
ತಾಪತ್ರೇಯನಕ್ ತಪ್ಪಿದ್ದಲ್ಲ!
ಸುಳ್ಳಂತ್ ಅನ್ನೌನ್ ಬರಲಿ.

--ಜಿ ಪಿ ರಾಜರತ್ನಂ.
logoblog

Thanks for reading ರತ್ನನ್ ಯೋಚ್ನೆ - ರತ್ನನ ಪದಗಳು. - Rathnan Padagalu

Previous
« Prev Post

No comments:

Post a Comment

Note: Only a member of this blog may post a comment.