Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Monday, August 28, 2017

ಬೆಳಗೆದ್ದು ಯಾರ ಮುಖವ - ಕಿರಿಕ್ ಪಾರ್ಟಿ (Kirik Party - Belageddu Lyrics)

  Sandeep T Gowda       Monday, August 28, 2017

ತನನಾನ್ನನ ತನನಾನ್ನನ ತನನಾನ್ನನಾನ್ನೆನಾನ್ನೇ
ತನನಾನ್ನನ ತನನಾನ್ನನ ತನನಾನ್ನನಾನ್ನೆನಾನ್ನೇ

ಬೆಳಗೆದ್ದು ಯಾರ ಮುಖವ ನಾನು ನೋಡಿದೇ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೇ
ನಿನ್ನ ಕಂಡ ಕನಸು Black and Whitu
ಇಂದು ಬಣ್ಣವಾಗಿದೇ
ನಿನ್ನ ಮೇಲೆ ಕವನ ಬರೆಯೊ ಗಮನ
ಈಗ ತಾನೇ ಮೂಡಿದೇ ।

ಕನಸಲ್ಲಿ - ಅರೆರೆರೆರೇ
ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ಇನ್ನೊಮ್ಮೆ
ಕನಸಲ್ಲಿ - ಅರೆರೆರೆರೇ
ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ  ಕಚಗುಳಿ ತಾಳಲಾರೆ ।।

ಪ್ರೀತಿಯಲ್ಲಿ ಹೊಸ ದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ ಹೋಗೋದು ಮಾಮೂಲೀ
ಸನ್ನೆಯಲ್ಲೇ ಹಾಡೊಂದು ಹಾಡುವ ವಿಧಾನ
ಕಾದು ಕೇಳೊ ಪ್ರೀತಿನೇ ಮಜಾನಾ ।

ಬಿಡದಂತಿರೋ ಬೆಸುಗೆ  ಸೆರೆ ಸಿಕ್ಕಿರೋ ಸಲಿಗೇ

ನಿನ್ನ ಸುತ್ತ ಸುಳಿಯೋ ಆಸೆಗೀಗ
ಆಯಸ್ ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೋ ಎಲ್ಲ ಕ್ಷಣವು
ಕಲ್ಪನೆಗೂ ಮೀರಿದೆ ।

ಕನಸಲ್ಲಿ - ಅರೆರೆರೆರೇ
ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ಇನ್ನೊಮ್ಮೆ
ಕನಸಲ್ಲಿ - ಅರೆರೆರೆರೇ
ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ  ಕಚಗುಳಿ ತಾಳಲಾರೆ ।।

ಬೆಳಗೆದ್ದು ಯಾರ ಮುಖವ ನಾನು ನೋಡಿದೇ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೇ
ನಿನ್ನ ಕಂಡ ಕನಸು Black and Whitu
ಇಂದು ಬಣ್ಣವಾಗಿದೇ
ನಿನ್ನ ಮೇಲೆ ಕವನ ಬರೆಯೊ ಗಮನ
ಈಗ ತಾನೇ ಮೂಡಿದೇ ।

ಕನಸಲ್ಲಿ - ಅರೆರೆರೆರೇ
ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ಇನ್ನೊಮ್ಮೆ
ಕನಸಲ್ಲಿ - ಅರೆರೆರೆರೇ
ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ  ಕಚಗುಳಿ ತಾಳಲಾರೆ ।।

ನ ನ ನ ನ ನ ನ ನ ನ ನ ನ ನ ನ ನ ನ ನ ನ ।
logoblog

Thanks for reading ಬೆಳಗೆದ್ದು ಯಾರ ಮುಖವ - ಕಿರಿಕ್ ಪಾರ್ಟಿ (Kirik Party - Belageddu Lyrics)

Previous
« Prev Post

No comments:

Post a Comment

Note: Only a member of this blog may post a comment.